ಬೆಂಗಳೂರು: ಇತ್ತೀಚೆಗೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರ ಮದುವೆಯ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಚಂದನ್ ಪ್ರೀತಿಸಿ ಮದುವೆಯಾಗುತ್ತಾರಾ ಅಥವಾ ಮನೆಯಲ್ಲಿ ತೋರಿಸುವ ಹುಡುಗಿಯನ್ನು ವರಿಸುತ್ತಾರಾ ಎಂಬ ಪ್ರಶ್ನೆಗಳು ಹರಿದಾಡುತ್ತಿದ್ದವು. ಈಗ ಈ ಎಲ್ಲ ಗೊಂದಲಗಳಿಗೂ ಚಂದನ್ ಸ್ಪಷ್ಟನೆ ಕೊಟ್ಟಿದ್ದಾರೆ.ಚಂದನ್ ತಾವು ಲವ್ ಮ್ಯಾರೇಜ್ ಆಗುವುದಾಗಿ ತಮ್ಮ ತಂದೆ-ತಾಯಿಯ ಮುಂದೆಯೇ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ‘ಕನ್ನಡ ಕೋಗಿಲೆ’ ಕಾರ್ಯಕ್ರಮದಲ್ಲಿ ಚಂದನ್ ನಾನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿದ್ದಾರೆ.ಈ ಕಾರ್ಯಕ್ರಮದಲ್ಲಿ ಚಂದನ್ ತೀರ್ಪುಗಾರರಾಗಿದ್ದು, ನಿರೂಪಕಿ ಅನುಪಮ ಗೌಡ ಅವರು ಚಂದನ್ ಗೆ ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಆಗಲು ಇಷ್ಟ ಪಡುತ್ತೀರ ಎಂದು ಪ್ರಶ್ನೆ ಕೇಳುತ್ತಾರೆ.ಅನುಪಮ ಗೌಡ ಅವರು ಕೇಳಿದ ಪ್ರಶ್ನೆಗೆ ಚಂದನ್ ತಾಯಿ ಮಧ್ಯ ಪ್ರವೇಶಿಸಿ, ಚಂದನ್ ಲವ್ ಅಥವಾ ಅರೆಂಜ್ ಯಾವ ರೀತಿಯ ಮದುವೆಯಾದರು ನನಗೆ ಒಪ್ಪಿಗೆ ಇದೆ. ನಾನು ಎಲ್ಲದಕ್ಕೂ ರೆಡಿ ಇದ್ದೀನಿ ಎಂದು ನಗುನಗುತ್ತಲೆ ಉತ್ತರಿಸಿದ್ದಾರೆ. ಬಳಿಕ ಅಮ್ಮ ಕೊಟ್ಟ ಉತ್ತರಕ್ಕೆ ಚಂದನ್ ಪ್ರತಿಕ್ರಿಯಿಸಿ, ಅವರೆ ಒಪ್ಪಿಗೆ ಸೂಚಿಸಿದ್ದಾರೆ ಅಂದರೆ ನಾನು ಲವ್ ಮ್ಯಾರೇಜ್ ಆಗುತ್ತೇನೆ ಎಂದು ಉತ್ತರಿಸಿದ್ದಾರೆ.ಇದೇ ವೇಳೆ ನಟ ಸಾಧುಕೋಕಿಲ ಅವರು, ಚಂದನ್ ಪ್ರೀತಿ ಮಾಡಿದ್ದಾರ, ಹುಡುಗಿ ಇದರಾ, ಇಲ್ಲವಾ ಎಂದು ಚಂದನ್ ಅವರ ಕಾಲೆಳೆದಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv Sign in to your account
Username or Email Address


Password

 Remember Me


