ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಬಳಿಯ ವರುಣಾ ನಾಲೆಗೆ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳು ಎಲ್ಲರ ಮುಂದೆ ನೋಡ ನೋಡುತ್ತಿದ್ದಂತೆ ನಾಲೆಗೆ ಹಾರಿದ್ದಾರೆ.ತಾಯಿ ಕಮಲ (45) ಮಕ್ಕಳಾದ ವೈಷ್ಣವಿ (18) ಹಾಗೂ ವರ್ಷಾ (14) ನಾಲೆಗೆ ಹಾರಿದವರಾಗಿದ್ದಾರೆ. ಮೂಲತಃ ಕಮಲ ಮತ್ತು ಮಕ್ಕಳು ಮೈಸೂರು ನಿವಾಸಿಗಳಾಗಿದ್ದಾರೆ. ಗುರುವಾರ ಸಂಜೆ ತನ್ನ ಇಬ್ಬರು ಮಕ್ಕಳೊಂದಿಗೆ ಶ್ರೀರಂಗಪಟ್ಟಣದ ತಾಲೂಕಿನ ಕೆಆರ್‌ಎಸ್‌ ಬಳಿಯ ವರುಣಾ ನಾಲೆಯ ಹತ್ತಿರ ಕಮಲರವರು ಬಂದಿದ್ದಾರೆ. ಈ ವೇಳೆ ಎಲ್ಲರು ನೋಡ ನೋಡುತ್ತಲೆ ಇರುವಾಗಲೇ ಏಕಾಏಕಿ ನಾಲೆಗೆ ಹಾರಿದ್ದಾರೆ. ಎಂದು ತಿಳಿದು ಬಂದಿದೆ.ತಾಯಿ ಹಾಗೂ ಮಕ್ಕಳು ನಾಲೆಗೆ ಹಾರಿದ ತಕ್ಷಣ ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ನಾಲೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದು ಹಾಗೂ ಕತ್ತಲಾಗಿದ್ದರಿಂದ ಕಾರ್ಯಾಚರಣೆಯನ್ನು ಕೈಗೊಂಡಿರಲಿಲ್ಲ. ಇಂದು ಮುಂಜಾನೆ ಕೆಆರ್‌ಎಸ್‌ ಜಲಾಶಯ ಮೂಲಕ ನಾಲೆಗೆ ಹರಿಯುತ್ತಿರುವ ನೀರಿನ ಪ್ರಮಾಣವನ್ನು ತಗ್ಗಿಸಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಾಯಿ ಹಾಗೂ ಮಕ್ಕಳಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.ಮಾಹಿತಿಗಳ ಪ್ರಕಾರ ಕಮಲರವರು ತಮ್ಮ ಪತಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಕೆಆರ್‌ಎಸ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


