ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಂದನವನದ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಬೇಬಿ ಮೂನ್ ಹೋಗಿದ್ದರು. ಸದ್ಯ ರಾಧಿಕಾ ತಮ್ಮ ಬೇಬಿ ಮೂನ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.ರಾಧಿಕಾ ಅವರನ್ನು ಯಶ್ ಮಾಲ್ಡೀವ್ಸ್ ಗೆ ಪ್ರವಾಸಕ್ಕಾಗಿ ಕರೆದುಕೊಂಡು ಹೋಗಿದ್ದರು. ಸದಾ ಚಿತ್ರೀಕರಣದಲ್ಲಿ ಬುಸ್ಯಿ ಆಗಿರುವ ಯಶ್ ಸಣ್ಣ ಬ್ರೇಕ್ ತೆಗೆದುಕೊಂಡು ಪತ್ನಿಯೊಂದಿಗೆ ಸಮುದ್ರ ತೀರದಲ್ಲಿ ಸುತ್ತಾಡಿದ್ದಾರೆ. ಈ ಮೂಲಕ ಗರ್ಭಿಣಿ ಪತ್ನಿಯ ಆಸೆ ತೀರಿಸಿದ್ದಾರೆ. ಇದನ್ನೂ ಓದಿ: ಹೇಗಿದೆ ಗರ್ಭಿಣಿ ರಾಧಿಕಾ ಆಹಾರ ಶೈಲಿಬೇಬಿ ಮೂನ್ ಸಂತಸದ ಕ್ಷಣಗಳ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ರಾಧಿಕಾ ಪಂಡಿತ್, ಸದ್ಯ ನಾವು ಬೇಬಿ ಮೂನ್ ನಲ್ಲಿದ್ದು, ಇಲ್ಲಿ ಅವರು, ನಾನು, ಸಮುದ್ರ ಮತ್ತು ನಾವು ಮೂವರು ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ರಾಧಿಕಾ ಪಂಡಿತ್, ಯಶ್ ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಾಣಬಹುದಾಗಿದೆ. ಮತ್ತೊಂದು ಪೋಸ್ಟ್ ನಲ್ಲಿ ಬೇಬಿ ಮೂನ್ ಫೋಟೋಗಳನ್ನು ಶೀಘ್ರದಲ್ಲೇ ನಿರೀಕ್ಷಿಸಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್!ರಾಧಿಕಾ ಅವರ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ಲೈಕ್ ಕಮೆಂಟ್ ಮಾಡಿ ಶುಭ ಹಾರೈಸಿದ್ದಾರೆ. ಅಂದಹಾಗೇ ಹಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಬೇಬಿ ಮೂನ್ ಯೋಚನೆ ಈ ಮೂಲಕ ಸ್ಯಾಂಡಲ್‍ವುಡ್‍ಗೂ ಪರಿಚಯವಾಗಿದೆ. ಬಾಲಿವುಡ್‍ನ ಹಲವು ಜೋಡಿಗಳು ಕೂಡ ಮಾಲ್ಡೀವ್ಸ್ ದ್ವೀಪವನ್ನೇ ಬೇಬಿ ಮೂನ್‍ಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿನ ನಿಸರ್ಗ, ಸುಂದರ ತಾಣಗಳು ಮಗುವಿನ ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ. ಇದನ್ನೂ ಓದಿ: ಸುದೀಪ್ ದಂಪತಿಗೆ ಧನ್ಯವಾದ ತಿಳಿಸಿದ್ರು ರಾಧಿಕಾ ಪಂಡಿತ್ಯಾವಾಗಲೂ ಅಭಿಮಾನಿಗಳೊಂದಿಗೆ ತಮ್ಮ ಸಂತಸ ಕ್ಷಣಗಳನ್ನು ಹಂಚಿಕೊಳ್ಳುವ ಯಶ್-ರಾಧಿಕಾ ಜೋಡಿ ತಮ್ಮ ಜೀವನದ ಬಹುಮುಖ್ಯ ಸಮಯವನ್ನು ಹಂಚಿಕೊಂಡಿದ್ದಾರೆ. ಇತ್ತ ಯಶ್ ಸದ್ಯ `ಮೈ ನೇಮ್ ಇಸ್ ಕಿರಾತಕ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ನವೆಂಬರ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


