ಉಡುಪಿ: ನಾನು ಬಾಂಬೆಗೂ ಹೋಗಿಲ್ಲ, ಎಲ್ಲೂ ಹೋಗಿಲ್ಲ. ಸರ್ಕಾರದ ಒಳಗೆ ಇದ್ದೇನೆ. ನಾನು ಉಡುಪಿಯಲ್ಲಿಯೇ ಇದ್ದೇನೆ ನೋಡಿ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದ್ದಾರೆ.ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಾನು ಬಾಂಬೆಗೆ ಹೋಗಿದ್ದೇನೆ ಅಂತ ಸುದ್ದಿಯಾಗಿದೆ. ಬಿಜೆಪಿಯಿಂದ ಯಾವುದೇ ಆಹ್ವಾನ ಬಂದಿಲ್ಲ. ಸದ್ಯಕ್ಕೆ ಬಿಜೆಪಿಗೆ ಬೆಂಬಲ ನೀಡುವ ವಿಚಾರವಿಲ್ಲ ಎಂದು ಸ್ಪಷ್ಟನೆ ನೀಡಿದರು.ನಾನು ಸ್ವತಂತ್ರ ಮತ್ತು ಪಕ್ಷೇತರ ಶಾಸಕ. ಕಾಂಗ್ರೆಸ್, ಜೆಡಿಎಸ್ ಯಾಕೆ ಸೇರಬೇಕು? ಕೆಪಿಜೆಪಿ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವೆ ಹಾಗೂ ಅದೇ ಪಕ್ಷದಿಂದ ಆಯ್ಕೆಯಾಗಿದ್ದೇನೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವೆ. ಪಕ್ಷ ತೊರೆಯುವ ವಿಚಾರವಿಲ್ಲ ಎಂದರು.ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಆಪ್ತರ ಮದುವೆಗೆ ಬಂದಿದ್ದೇನೆ. ಸಮ್ಮಿಶ್ರ ಸರ್ಕಾರವು ಐದು ವರ್ಷ ಸುಭದ್ರವಾಗಿರುತ್ತದೆ. ಮೈತ್ರಿ ಸರ್ಕಾರ ಇನ್ನೂ ಎದ್ದೇಳುತ್ತಿಲ್ಲ ಅಂತ ಮಾಧ್ಯಮಗಳು ಹೇಳುತ್ತಿವೆ. ಸರ್ಕಾರ ಎದ್ದಾಗಿದೆ, ಅಭಿವೃದ್ಧಿ ಕಾರ್ಯ ಪ್ರಾರಂಭಿಸಿದೆ. ರಾಜ್ಯದ ಜನರ ಎಲ್ಲಾ ಕೆಲಸಗಳು ಆಗುತ್ತವೆ ಎಂದು ತಿಳಿಸಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


