ಬೆಂಗಳೂರು: ಕಡೆಗೂ ಅಭಿಮಾನಿಗಳೆಲ್ಲ ಅಗಾಧ ನಿರೀಕ್ಷೆಯಿಂದ ಕಾಯುತ್ತಿದ್ದ ಕ್ಷಣಗಳು ಹತ್ತಿರಾಗಿವೆ. ಯಜಮಾನ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವ ರೀತಿಯ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆಂಬ ಕುತೂಹಲ ತಣಿಯುವ ಕಾಲ ಸನ್ನಿಹಿತವಾಗಿದೆ!ಇದೇ ತಿಂಗಳ 23ನೇ ತಾರೀಕಿನಂದು ಬೆಳಗ್ಗೆ 10 ಗಂಟೆಗೆ ಯಜಮಾನ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.ಫಸ್ಟ್ ಲುಕ್ ಬಿಡುಗಡೆಯ ಹಿನ್ನೆಲೆಯಲ್ಲಿಯೇ ಅಭಿಮಾನಿಗಳೆಲ್ಲ ಖುಷಿ ಪಡುವಂಥಾದ್ದೊಂದು ಕ್ರಿಯೇಟಿವ್ ಐಡಿಯಾವನ್ನೂ ಹರಿಬಿಡಲಾಗಿದೆ. ಫಸ್ಟ್ ಲುಕ್ ರಿಲೀಸ್ ಬಗೆಗೇ ಒಂದು ಪೋಸ್ಟರ್ ರೆಡಿ ಮಾಡಿ ಅದರಲ್ಲಿ ದರ್ಶನ್ ಅವರ ಬ್ಯಾಕ್ ಪೋಸ್ ಇರೋ ಚಿತ್ರವನ್ನು ಹಾಕಲಾಗಿದೆ. ಅದರಲ್ಲಿ ಅಭಿಮಾನಿಗಳೆಲ್ಲ ಅದೇ ಮಾದಲಿಯಲ್ಲಿ ಫೋಟೋ ತೆಗೆಸಿ ಕೊಲಾಜ್ ಮಾಡಿ ಪ್ರಕಟಿಸಿಕೊಳ್ಳುವ ಆಪ್ಷನ್ ಅನ್ನೂ ಇಡಲಾಗಿದೆ. ಇದು ಅಭಿಮಾನಿಗಳಲ್ಲೊಂದು ಹೊಸಾ ಕ್ರೇಜನ್ನೇ ಹುಟ್ಟು ಹಾಕೋದು ಖಚಿತ!ಯಜಮಾನ ಚಿತ್ರದ ಚಿತ್ರೀಕರಣ ಆರಂಭವಾದಂದಿನಿಂದಲೇ ಇದರಲ್ಲಿನ ದರ್ಶನ್ ಅವರ ಗೆಟಪ್ಪಿನ ಬಗ್ಗೆ ಸಣ್ಣದೊಂದು ಸುಳಿವೂ ಜಾಹೀರಾಗದಂತೆ ನೋಡಿಕೊಳ್ಳಲಾಗಿತ್ತು. ಖುದ್ದು ದರ್ಶನ್ ಅವರೇ ಈ ರೀತಿಯಲ್ಲೊಂದು ತಾಕೀತು ಮಾಡಿದ್ದರು. ಅದನ್ನು ಪರಿಪಾಲಿಸಿಕೊಂಡು ಬಂದಿರೋ ಚಿತ್ರತಂಡ ಅಫಿಶಿಯಲ್ಲಾಗಿ ಫಸ್ಟ್ ಲುಕ್ ಅನಾವರಣಗೊಳಿಸೋ ಮೂಲಕ ಅಭಿಮಾನಿಗಳ ಕುತೂಹಲ ತಣಿಸಲು ಮುಂದಾಗಿದೆ. ಚಿತ್ರತಂಡ ಫಸ್ಟ್ ಲುಕ್ ರಿಲೀಸ್ ದಿನಾಂಕ ನಿಗದಿ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವನ್ನು ಹಂಚಿಕೊಳ್ಳುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


