ಬೆಂಗಳೂರು: ರೌಡಿಶೀಟರ್ ಮೇಲೆ ಮಚ್ಚಿನಿಂದ ಬೀಸಿ ಮನಸೋ ಇಚ್ಛೆ ಹಲ್ಲೆಗೈದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ನೈಸ್ ರೋಡ್ ಬಳಿ ನಡೆದಿದೆ.ಹರೀಶ್ ಕೊಲೆಯಾದ ರೌಡಿಶೀಟರ್. ಈತ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ನಿವಾಸಿಯಾಗಿದ್ದು, ಬುಧವಾರ ನೈಸ್ ರಸ್ತೆಯ ತುಳಸೀಪುರ ಬಳಿ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ.ಬುಧವಾರ ಸಂಜೆ ಹರೀಶ್ ತುಳಸೀಪುರ ಕೆರೆ ಬಳಿ ಬೈಕಿನಲ್ಲಿ ಹೋಗುತ್ತಿದ್ದನು. ಆಗ ಕಿಡಿಗೇಡಿಗಳು ಹಿಂದಿನಿಂದ ಕಾರಿನಲ್ಲಿ ಬಂದು ಗುದ್ದಿದ್ದಾರೆ. ಈ ವೇಳೆ ಬೈಕ್ ಸವಾರ ನೆಲಕ್ಕೆ ಬಿದ್ದಿದ್ದಾನೆ. ತಕ್ಷಣ ಕಾರಿನಲ್ಲಿದ್ದ ಹಂತಕರು ಮನಸೋ ಇಚ್ಛೆ ಹರೀಶ್ ಮೇಲೆ ಮಚ್ಚು ಬೀಸಿದ್ದಾರೆ. ಕೊನೆಗೆ ತಲೆಯಲ್ಲೇ ಮಚ್ಚು ಬಿಟ್ಟು ಪರಾರಿಯಾಗಿದ್ದಾರೆ.ಹರೀಶ್ ಕೆಲಸಕ್ಕೆ ಹೋಗದೆ ಉಂಡಾಡಿ ಗುಂಡನಾಗಿದ್ದನು. ಅಲ್ಲದೇ ಈತ ಹುಳಿಮಾವು ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಮೇಲ್ನೋಟಕ್ಕೆ ಹಳೆಯ ವೈಷಮ್ಯದಿಂದ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಅಕ್ರಮ ಸಂಬಂಧಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ಸದ್ಯಕ್ಕೆ ತಲಘಟ್ಟಪುರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆ ಮಾಡಿರುವ ಹಂತಕರಿಗಾಗಿ ಬಲೆ ಬೀಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


