ಹಾವೇರಿ: ಸಚಿವ ಸಂಪುಟ ವಿಸ್ತರಣೆ ಅನ್ನೋದು ನಾಳೆ ಬಾ ಅನ್ನೋ ಕಥೆಯಂತಿದೆ. ಸಚಿವ ಸ್ಥಾನ ಮೂರನೇ ವಾರ ಅಂದ್ರು. ಈಗ ಅಕ್ಟೋಬರ್ ಮೂರರ ನಂತರ ಅಂತಿದ್ದಾರೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗೋದು ಒಳ್ಳೆಯದು ಎಂದು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕೆಪಿಸಿಸಿ ಅಧ್ಯಕ್ಷ ಮತ್ತು ಡಾ. ಪರಮೇಶ್ವರ್ ಸೇರಿದಂತೆ ಮುಖಂಡರಿಗೆ ತಿಳಿಸಿದ್ದೇನೆ. ತಡವಾದಷ್ಟು ಅಸಮಾಧನ ಹೆಚ್ಚಾಗುತ್ತೆ. ರಾಜ್ಯ ರಾಜಕಾರಣದಲ್ಲಿ ಏನೋ ಬೇಕಾದರೂ ಆಗಬಹುದು. ಸಿಕ್ಕಲ್ಲಿ ತೂರಿಕೊಳ್ಳೋ ಜನರಿದ್ದಾರೆ. ಸದ್ಯ ಬಿಜೆಪಿಯವರು ನನ್ನನ್ನು ಸಂಪರ್ಕಿಸಿಲ್ಲ. ನಾನು ಎಲ್ಲೂ ಹೋಗಿಲ್ಲ. ಈಗ ಹಾವೇರಿಯಲ್ಲಿದ್ದೇನೆ. ರಾಜಕಾರಣದಲ್ಲಿ ಏನೋ ಬೇಕಾದರೂ ಆಗಬಹುದು’ ಎಂದು ತಮ್ಮ ಅಸಮಾಧಾನವನ್ನ ಹೊರಹಾಕಿದರು.ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಒತ್ತಾಯಿಸುತ್ತಿದ್ದೇನೆ. ಆದರೆ ಅವರು ಅಕ್ಟೋಬರ್ ಮೂರರ ನಂತರ ಸಂಚಿವ ಸಂಪುಟ ಮಾಡುತ್ತೇವೆ ಎಂದಿದ್ದಾರೆ ಅಂತ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


