ಬೆಂಗಳೂರು: ನಟ-ನಟಿಯರು ಸ್ಟಾರ್ ಆದ ಮೇಲೆ ಹೆಸರು ಬದಲಾಯಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈಗ ಕೆಂಡಸಂಪಿಗೆಯ ನಟಿ ಮಾನ್ವಿತಾ ಹರೀಶ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.ನಟಿ ಮಾನ್ವಿತಾ ಹರೀಶ್ ಅವರು ಮಾನ್ವಿತಾ ಕಾಮತ್ ಎಂದು ಬದಲಾಯಿಸಿಕೊಂಡಿದ್ದಾರೆ. ತನ್ನ ಟ್ವಿಟ್ಟರ್, ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಮಾನ್ವಿತಾ ಹರೀಶ್ ಬದಲಾಗಿ ಮಾನ್ವಿತಾ ಕಾಮತ್ ಎಂದು ಬದಲಾಗಿದೆ.ಮಾನ್ವಿತಾ ಇತ್ತಿಚೇಗೆ ಹೈದರಾಬಾದ್ ನಲ್ಲಿ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಅಲ್ಲಿಂದ ಬಂದ ನಂತರ ಹೆಸರು ಬದಲಾಯಿಸಿಕೊಂಡಿದ್ದರು. ಇದರಿಂದ ಅಭಿಮಾನಿಗಳು ಮಾನ್ವಿತಾ ಅವರು ಮದುವೆಯಾಗಿದ್ದಾರೆ ಅದಕ್ಕೆ ಹೆಸರು ಬದಲಾಯಿಸಿಕೊಂಡಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಆದರೆ ಮಾನ್ವಿತಾ ಅವರ ತಂದೆಯ ಹೆಸರನ್ನೇ ತನ್ನ ಹೆಸರಿನ ಕೊನೆಯಲ್ಲಿ ಹಾಕಿಕೊಂಡಿದ್ದಾರೆ.ಮಾನ್ವಿತಾ ತಂದೆಯ ಪೂರ್ಣ ಹೆಸರು ಹರೀಶ್ ಕಾಮತ್. ಇದುವರೆಗೂ ಮಾನ್ವಿತಾ ತಮ್ಮ ತಂದೆಯ ಹೆಸರನ್ನು ತನ್ನ ಹೆಸರಿನ ಕೊನೆಯಲ್ಲಿ ಇಟ್ಟುಕೊಂಡು ಮಾನ್ವಿತಾ ಹರೀಶ್ ಎಂದು ಗುರುತಿಸಿಕೊಂಡಿದ್ದರು. ಈಗ ಕಾಮತ್ ಮಾನ್ವಿತಾ ಅವರ ಕುಟುಂಬದ ಸರ್ ನೇಮ್ ಆಗಿದ್ದು, ಈಗ ತಂದೆಯ ಹೆಸರು ಬದಲಿಗೆ ಕಾಮತ್ ಎಂದು ಸೇರಿಸಿಕೊಂಡಿದ್ದಾರೆ. ಆದ್ದರಿಂದ ಇನ್ನು ಮುಂದೆ ಮಾನ್ವಿತಾ ಹರೀಶ್ ಬದಲಿಗೆ ಮಾನ್ವಿತಾ ಕಾಮತ್ ಎಂದು ಗುರುತಿಸಿಕೊಳ್ಳುತ್ತಾರೆ.ಮಾನ್ವಿತಾ ಅವರು ‘ಕೆಂಡಸಂಪಿಗೆ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈಗ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಲಂಡನ್ ನಲ್ಲಿ ನಡೆಯುತ್ತಿದೆ. ಮಾನ್ವಿತಾ ನಟ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


