ಚಿಕ್ಕಬಳ್ಳಾಪುರ: ಯಡಿಯೂರಪ್ಪಗೆ ಈ ಮೊದಲು ಇದ್ದ ಹುರುಪು, ಉತ್ಸಾಹ ತಿರುಗಾಟ ಇಲ್ಲ. ಬಿಎಸ್‍ವೈ ಫೇಸ್ ವ್ಯಾಲ್ಯೂ ಕಡಿಮೆಯಾಗಿದೆ ಎಂದು ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಹೇಳಿದ್ದಾರೆ.ನಂದಿಗಿರಿಧಾಮಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 10-12 ಜನ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರ ಉರುಳಿಸಲು ಯಡಿಯೂರಪ್ಪ ಪ್ರಯತ್ನಿಸಿದ್ದರು. ಆದರೆ ಬಿಜೆಪಿಯವರು ಕರೆದರೆ ಕಾಂಗ್ರೆಸ್‍ನವರು, ಜೆಡಿಎಸ್‍ನವರು ಯಾರೂ ಹೋಗಲಿಲ್ಲ ಎಂದರು.ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನಾವು ಯಾರೂ ಹೋಗುವುದಿಲ್ಲ. ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯೂ ಕಡಿಮೆ ಆಗಿದೆ. ಅವರು ಮೀಟಿಂಗ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಅವರಿಗೆ ಹೈಕಮಾಂಡ್‍ಗಳಾದ ಮೋದಿ ಅಮಿತ್ ಶಾ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಈಗ ಯಡಿಯೂರಪ್ಪ ಅವರ ಹೋರಾಟ ಕಡಿಮೆ ಆಗಿದೆ. ಸದ್ಯ ಈಗ ಯಾವೊಬ್ಬ ಶಾಸಕ ಬಿಜೆಪಿಗೆ ಹೋಗುತ್ತಿಲ್ಲ ಎಂದು ಸಚಿವ ಎಂ.ಸಿ ಮನಗೂಳಿ ಹೇಳಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


