ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟ ಸೃಜನ್ ಲೋಕೇಶ್ ಇವರಿಬ್ಬರು ಕುಚುಕು ಗೆಳೆಯರಾಗಿದ್ದು, ಈಗ ಸೃಜನ್ ಕೂಡ ಪ್ರಾಣಿಯನ್ನು ದತ್ತು ಪಡೆಯುವ ಮೂಲಕ ತಮ್ಮ ಆತ್ಮೀಯ ಗೆಳೆಯ ದರ್ಶನ್ ಹಾದಿಯನ್ನು ತುಳಿದಿದ್ದಾರೆ.ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬ ಪ್ರೀತಿ. ಆದ್ದರಿಂದ ಅವರು ಮೈಸೂರು ಮೃಗಾಲಯದ ಹುಲಿಯನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿ ದತ್ತು ಮಗನನ್ನು ನೋಡಿಕೊಂಡು ಬಂದಿದ್ದರು. ಈಗ ಇವರ ಹಾದಿಯನ್ನೇ ಸೃಜನ್ ಕೂಡ ತುಳಿದಿದ್ದು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.https://www.instagram.com/p/Bn1SPNBlglI/?hl=en&taken-by=kirikkeerthiಸೃಜನ್ ಲೋಕೇಶ್ ಅವರು ಮೈಸೂರಿನ ಅಭಯಾರಣ್ಯದಲ್ಲಿ ಶ್ವೇತವರ್ಣದ ಹುಲಿಯನ್ನು ದತ್ತು ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. “ಸೃಜನ್ ಲೋಕೇಶ್ ಅವರು ಮೈಸೂರು ಮೃಗಾಲಯದ ಹುಲಿಯೊಂದನ್ನು ದತ್ತು ಪಡೆದಿದ್ದು, ನಿಮ್ಮ ಪ್ರಾಣಿ ಪ್ರೀತಿಗೆ ನಮ್ಮ ಕೋಟಿ ನಮಸ್ಕಾರ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ದರ್ಶನ್, “ಮೈಸೂರು ಅಭಯಾರಣ್ಯದಲ್ಲಿ ಶ್ವೇತವರ್ಣದ ಹುಲಿಯನ್ನು ದತ್ತು ಪಡೆದುಕೊಂಡಿರುವ ನನ್ನ ಗೆಳೆಯ ಸೃಜನ್‍ಗೆ ಅಭಿನಂದನೆಗಳು. ವನಜೀವಿ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದಕ್ಕೆ ಅನುಗುಣವಾಗಿ ನಮ್ಮ ಕೈಲಾದ ಸೇವೆಯನ್ನು ಮಾಡೋಣ” ಎಂದು ದರ್ಶನ್ ಟ್ವೀಟ್ ಮಾಡಿ ತನ್ನ ಸಂತಸವನ್ನು ಹಂಚಿಕೊಂಡಿದ್ದಾರೆ.ದರ್ಶನ್ ಮತ್ತು ಸೃಜನ್ ಇಬ್ಬರು ಒಟ್ಟಿಗೆ ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯಕ್ಕೆ ದರ್ಶನ್ ‘ಯಜಮಾನ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvಮೈಸೂರು ಅಭಯಾರಣ್ಯದಲ್ಲಿ ಶ್ವೇತವರ್ಣದ ಹುಲಿಯನ್ನು ದತ್ತು ಪಡೆದುಕೊಂಡಿರುವ ನನ್ನ ಗೆಳೆಯ ಸೃಜನ್ ಗೆ ಅಭಿನಂದನೆಗಳು. ವನಜೀವಿ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದಕ್ಕೆ ಅನುಗುಣವಾಗಿ ನಮ್ಮ ಕೈಲಾದ ಸೇವೆಯನ್ನು ಮಾಡೋಣ ???? @srujanlokesh pic.twitter.com/QLvsHNQJjJ— Darshan Thoogudeepa (@dasadarshan) September 18, 2018Sign in to your account
Username or Email Address


Password

 Remember Me


