ತುಮಕೂರು: ಅಕ್ರಮ ಮರಳು ದಂಧೆಯ ವಿರುದ್ಧ ದೂರು ನೀಡಿದ್ದರಿಂದ ಸಿಟ್ಟಿಗೆದ್ದ ದಂಧೆಕೋರರು ದೂರುದಾರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯಲ್ಲಿ ನಡೆದಿದೆ.ಹೊನ್ನವಳ್ಳಿ ಗ್ರಾಮದ ನಿವಾಸಿ ಮಹಾಲಿಂಗಪ್ಪ ಕುಟುಂಬದವರು ದಂಧೆಕೋರರ ಹಲ್ಲೆಗೊಳಗಾಗಿದ್ದಾರೆ. ದಂಧೆಕೋರರಾದ ಜಯಣ್ಣ, ಪುಟ್ಟಸ್ವಾಮಿ, ಬಸವರಾಜು, ವೀಣಾ ಸೇರಿದಂತೆ ಇತರ ಗುಂಪು ದೂರುದಾರರ ಮೇಲೆ ಮಾರಣಾಂತಿಕವಾಗಿ ಮೇಲೆ ಹಲ್ಲೆ ಮಾಡಿದ್ದಾರೆ.ದಂಧೆಕೋರರು ಕಬ್ಬಿಣದ ರಾಡ್, ಕಲ್ಲು, ಮತ್ತು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಈ ಘಟನೆಯಿಂದ ಮಹಾಲಿಂಗಪ್ಪ, ಶಂಕರಪ್ಪ, ಶಾಂತಮ್ಮ, ಮತ್ತು ಹೊನ್ನರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಶಂಕರಪ್ಪರ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ. ಸದ್ಯಕ್ಕೆ ಗಾಯಾಳುಗಳನ್ನು ತಿಪಟೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಘಟನೆ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


