ಮಂಡ್ಯ: ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದು, ಬಂಧನ ಭೀತಿಯಿಂದ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಬಸಪ್ಪ ಕಳೆದ ರಾತ್ರಿ ತನ್ನ ಪತ್ನಿ ಬಸಮಣಿ ಎಂಬಾಕೆಗೆ ಸುತ್ತಿಗೆಯಿಂದ ಹೊಡೆದು ತಲೆ ಮರೆಸಿಕೊಂಡಿದ್ದನು. ತಕ್ಷಣ ಬಸಮಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಸಮಣಿ ಸಾವನ್ನಪ್ಪಿದ್ರು.ಪತ್ನಿ ಸಾವಿನ ವಿಷಯ ತಿಳಿದು, ಗಂಡ ಬಸಪ್ಪ ಗ್ರಾಮದ ಹೊರ ವಲಯದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಪದೇ ಪದೇ ನಡೆಯುತ್ತಿದ್ದ ಗಂಡ ಹೆಂಡತಿಯ ಜಗಳ ರಾತ್ರಿ ಕೂಡ ಮುಂದುವರಿದಿದೆ. ಇದ್ರಿಂದ ಕುಪಿತಗೊಂಡ ಗಂಡ ಬಸಪ್ಪ, ಹೆಂಡತಿ ಮಲಗಿದ ನಂತರ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಿಕ್ಕಬಳ್ಳಾಪುರದಲ್ಲಿಯೂ ಇಂತದ್ದೇ ಘಟನೆ ನಡೆದಿತ್ತು. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊಮ್ಮಸಂದ್ರ ಗ್ರಾಮದಲ್ಲಿ ತನ್ನ ಕೈಯಿಂದಲೇ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಪತ್ನಿಯನ್ನು ಕಂಡು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಮ್ಮಸಂದ್ರ ಗ್ರಾಮದ ನಿವಾಸಿಗಳಾದ ದೇವರಾಜ್ (28) ಮತ್ತ ಶ್ಯಾಮಲಾ (22) ಸಾವನ್ನಪ್ಪಿದ ದಂಪತಿ. ಸೋಮವಾರ ದೇವರಾಜ್ ಹಾಗೂ ಶ್ಯಾಮಲ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದ್ದು, ಇದರಿಂದ ಕುಪಿತನಾದ ದೇವರಾಜ್ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಯ ಸಾವನ್ನು ಕಂಡ ಪತಿ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv






 Advertisement 




Sign in to your account
Username or Email Address


Password

 Remember Me


