ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬೈಕ್ ಸವಾರನ ಮೇಲೆ ರಾಡ್ ಬಿದ್ದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಆಗಸ್ಟ್ 31 ರಂದು ಹಲಸೂರು ಗೇಟ್ ಬಳಿಯ ಸುಣಕಲ್ ಪೇಟೆ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಸುಣಕಲ್ ಪೇಟೆ ಕ್ರಾಸ್ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಬಳಸಲಾದ ಕಬ್ಬಿಣ ರಾಡ್ ನಾಲ್ಕನೇ ಅಂತಸ್ತಿನಿಂದ ಬಿದಿದ್ದೆ. ರಾಡ್ ಬಿದ್ದ ಪರಿಣಾಮ ಕೇವಲ 20 ಸೆಕೆಂಡ್‍ಗಳಲ್ಲಿ ತರಕಾರಿ ಮಾರುವ ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸುಣಕಲ್ ಪೇಟೆ ಕ್ರಾಸ್ ಬಳಿ ಬರುತ್ತಿದ್ದ ಬೈಕ್ ಸವಾರ ಚಂದನ್ ತಲೆ ಮೇಲೆ 4-5 ಅಡಿಯ ರಾಡ್ ಬಿದಿದ್ದೆ. ಗಂಭೀರವಾಗಿ ಗಾಯಗೊಂಡಿದ್ದ ಚಂದನ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.ರಾಥೋಡ್ ಇನ್ವೆಸ್ಟ್ ಮೆಂಟ್ ಮಾಲೀಕ ಹಾಗೂ ಕಾಂಟ್ರಾಕ್ಟರ್ ಜೈರಾಮ್ ವಿರುದ್ಧ ಬೇಜವಾಬ್ದಾರಿತನದ ಆರೋಪ ಕೇಳಿ ಬಂದಿದೆ. ಸದ್ಯ ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


