ಬೆಂಗಳೂರು: ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ, ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ನಟಿ ಶೃತಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.ನಗರದ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಉಪೇಂದ್ರ ಅವರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ 51 ನೇ ಬರ್ತ್ ಡೇ ಆಚರಿಸಿಕೊಂಡರು. ಅಭಿಮಾನಿಗಳು ಅದ್ಧೂರಿಯಿಂದ ರಿಯಲ್ ಸ್ಟಾರ್ ಬರ್ತ್ ಡೇ ಆಚರಣೆ ಮಾಡಿದ್ರು.ಸಾಹಸಸಿಂಹ ವಿಷ್ಣುವರ್ಧನ್ ಅವರ 68 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಮಾಧಿ ಮುಂದೆ ಕೇಕ್ ಕಟ್ ಮಾಡೋದರ ಮೂಲಕ ಸಂಭ್ರಮಿಸಿದ್ರು. ಇಂದು ಸ್ಯಾಂಡಲ್‍ವುಡ್ ನಟಿ ಶೃತಿ ಸಹ ತಮ್ಮ ಬರ್ತ್‍ಡೇ ಆಚರಿಸಿಕೊಂಡಿದ್ದಾರೆ.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಉಪೇಂದ್ರ, ಸಿನಿಮಾಕ್ಕೆ ಸೇರಿ ಬಳಿಕ ಇದೂವರೆಗೂ ನಾನು ಬರ್ತ್ ಡೇ ಆಚರಿಸಿಕೊಂಡಿಲ್ಲ. ಅಭಿಮಾನಿಗಳೇ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದರು. ಹೀಗಾಗಿ ಇದು ಅಭಿಮಾನಿಗಳ ದಿನವೆಂದು ನಾನು ಯಾವತ್ತೂ ಹೇಳುತ್ತೇನೆ. ಇಂದು ಉಪ್ಪಿ ಬರ್ತ್ ಡೇ ಆಗಿದೆ. ಇನ್ನು ಮುಂದೆ ಯುಪಿಪಿ ಬರ್ತ್ ಡೇ ಆಗಬೇಕು. ಈಗಿನ ಜನಾಂಗ ಇನ್ನು 50 ವರ್ಷಗಳ ಕಾಲ ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಹೀಗಾಗಿ ಇಂದು ಅದಕ್ಕೋಸ್ಕರ ಒಂದು ವೇದಿಕೆ ಮಾಡಿದ್ದೇನೆ. ನಿಮಗೆಲ್ಲರಿಗೂ ಅದರ ಬಗ್ಗೆ ವಿವರವಾಗಿ ವಿಷಯ ತಿಳಿಸುತ್ತೇನೆ ಅಂದ್ರು.ಪ್ರಜಾಕೀಯದಲ್ಲಿ ಏಳು-ಬೀಳು ಅನ್ನೋದು ಇಲ್ಲ. ಯಾರು ನಂಬಿಕೆಯಿಟ್ಟು ಮುಂದೆ ಬರುತ್ತಾರೋ ಅವರಿಗೆ ಗೆಲುವು ಅಂತಾನೇ ಅರ್ಥ. ಎಷ್ಟು ವರ್ಷವಾದ್ರೂ ಸತ್ಯ ಹೇಳೋದಕ್ಕೆ ಸೋಲು-ಗೆಲುವು ಇಲ್ಲ. ಯಾವತ್ತಿದ್ರೂ ಇದಾಗಬೇಕು. ಖಂಡಿತ ಒಳ್ಳೆಯದಾಗುತ್ತದೆ. ಇಲ್ಲಿ ಯಾರು ತಪ್ಪು ಮಾಡುತ್ತಿದ್ದಾರೆ ಅಂತ ಹೇಳಲ್ಲ, ಹೀಗಾಗಿ ಅವರೆಲ್ಲರೂ ದೊಡ್ಡವರು. ತುಂಬಾ ವರ್ಷಗಳಿಂದಲೂ ಇರುವವರು, ಆದುದರಿಂದ ನಮಗಿಂತಲೂ ಅವರಿಗೆ ತುಂಬಾನೇ ಅನುಭವ ಇದೆ. ಆದ್ರೆ ಇಲ್ಲಿ ಹೊಸಬರೇ ಮಾಡಬೇಕಾದ್ದರಿಂದ ನಾನು ಹೊಸಬರಿಗೆ ಅಂತಾನೇ ಒಂದು ಪಕ್ಷ ಮಾಡಿದ್ದೇನೆ ಅಂತ ಹೇಳಿದ್ರು.ಇದೇ ವೇಳೆ ವಿಷ್ಣುವರ್ಧನ್ ಅಭಿಮಾನಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವಿಷ್ಣು ದಾದಾ ಅವರ 69ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ. ಪ್ರತೀ ವರ್ಷದಂತೆ ಈ ವರ್ಷವೂ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಅಭಿಮಾನಿಗಳು ಸೇರಿ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಬೆಳಗ್ಗೆ ಇತಿಶ್ರೀ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಬಳಗದಿಂದ ರಕ್ತದಾನ ಶಿಬಿರ, ಮನರಂಜನಾ ಕಾರ್ಯಕ್ರಮ, ಡೆಂಟಲ್ ಹಾಗೂ ನೇತ್ರದಾನ ಶಿಬಿರಗಳನ್ನು ಮಾಡುತ್ತಿದ್ದೇವೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


