ದಾವಣಗೆರೆ: ಪತ್ನಿಯ ಅಕ್ರಮ ಸಂಬಂಧ ಪತ್ತೆ ಹಚ್ಚಿ ಪ್ರಿಯಕರನ ಜೊತೆ ತನ್ನ ಪತ್ನಿ ರಾಸಲೀಲೆ ನಡೆಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದು ಸರಿಯಾಗಿ ಗೂಸ ಕೊಟ್ಟಂತಹ ಘಟನೆ ದಾವಣಗೆರೆಯ ಡಾಂಘೇ ಪಾರ್ಕ್ ಎದುರು ಇರುವ ಭಗತ್ ಸಿಂಗ್ ನಗರದಲ್ಲಿ ನಡೆದಿದೆ.ಗಿರೀಶ್ ಹಾಗೂ ಪೂರ್ಣಿಮಾ ಕಳೆದ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಗಿರೀಶ್ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದರೆ, ಹೆಂಡತಿ ಪೂರ್ಣಿಮಾ ಹರ್ಬಲ್ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಆದರೆ ತನ್ನ ಪತ್ನಿಯ ಅಕ್ರಮ ಸಂಬಂಧ ಬಗ್ಗೆ ಅನುಮಾನವಿದ್ದ ಹಿನ್ನೆಲೆ ತನ್ನ ಪತ್ನಿ ಪ್ರಿಯಕರನ ಜೊತೆ ಇದ್ದ ಸಂದರ್ಭದಲ್ಲಿ ಮನೆಗೆ ಹಾಜರ್ ಆಗಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ.ಪತ್ನಿ ಪೂರ್ಣಿಮಾಳನ್ನು ಹಾಗೂ ಆಕೆಯ ಪ್ರಿಯಕರ ಹನುಮಂತನನ್ನು ರೂಮಿನ ಬಾಗಿಲಿಗೆ ಬೀಗ ಹಾಕಿ ರಾದ್ದಾಂತ ಮಾಡಿದ್ದಾನೆ. ಪೊಲೀಸರನ್ನು ಕರೆ ತಂದು ಪೊಲೀಸರ ಎದುರಿಗೆ ಸರಿಯಾಗಿ ಗೂಸ ಕೊಟ್ಟಿದ್ದಾನೆ. ಪ್ರ್ರಿಯಕರ ಹನುಮಂತ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಹಲವು ದಿನಗಳಿಂದ ಪೂರ್ಣಿಮ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆ ಹೋಗುತ್ತಿದ್ದ.ಹಲವು ದಿನಗಳಿಂದ ಗಿರೀಶ್ ತನ್ನ ಪತ್ನಿ ಪೂರ್ಣಿಮಾ ಅಕ್ರಮ ಸಂಬಂಧ ಬಗ್ಗೆ ಗಲಾಟೆ ನಡೆಯುತ್ತಿತ್ತು. ಸದ್ಯ ಇಬ್ಬರು ಮನೆಯಲ್ಲಿದ್ದಾಗ ಗಿರೀಶ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಠಾಣೆಗೆ ಕರೆದೊಯ್ದು ಇಬ್ಬರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


