ಬೆಂಗಳೂರು: ಕೆಲವು ದಿನಗಳಿಂದ ಬ್ರೇಕ್ ಅಪ್ ಸುದ್ದಿಯಿಂದ ಬೇಸತ್ತು ಹೋಗಿದ್ದ ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ ಕೊಂಚ ರೀಲೀಫ್‍ಗಾಗಿ ಇದೀಗ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದಾರೆ.ಥೈಲ್ಯಾಂಡ್‍ನಲ್ಲಿರುವ ಪಟ್ಟಾಯಗೆ ರಕ್ಷಿತ್ ಶೆಟ್ಟಿ ಹೋಗಿದ್ದು, ಜೊತೆಗೆ ಆಪ್ತ ಸ್ನೇಹಿತ ಹಾಗೂ ನಿರ್ದೇಶಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕೂಡ ತೆರಳಿದ್ದಾರೆ.ಅಷ್ಟೇ ಅಲ್ಲದೇ ಮೂವರು ಒಟ್ಟಿಗೆ ಪ್ಲೇಟ್ ನಲ್ಲಿ ಕುಳಿತುಕೊಂಡು ಫೋಟೋವನ್ನು ಕ್ಲಿಕ್ಲಿಸಿಕೊಂಡಿದ್ದು, ಅಲ್ಲಿನ ಪ್ರವಾಸಿತಾಣಗಳಿಗೆ ತೆರಳಿ ಸುಂದರ ಕ್ಷಣವನ್ನು ಕಳೆಯುತ್ತಿದ್ದಾರೆ. ಸಾಮಾನ್ಯವಾಗಿ ಸಿನಿ ನಟರು ವಿದೇಶಕ್ಕೆ ತೆರಳುತ್ತಿದ್ದಾರೆ ಎಂದರೆ ಯಾವುದೋ ಸಿನಿಮಾ ಚಿತ್ರಿಕರಣಕ್ಕೆ ಅನ್ನಿಸುತ್ತದೆ. ಆದರೆ ಪುಷ್ಕರ್ ಅವರು ಫೇಸ್‍ಬುಕ್‍ನಲ್ಲಿ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಹಾಲಿಡೇಸ್ ಎಂದು ಬರೆದುಕೊಂಡಿದ್ದಾರೆ.ಸದ್ಯಕ್ಕೆ ರಕ್ಷಿತ್ ಫಾರಿನ್ ಟ್ರಿಪ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತ ‘ತೆನಾಲಿ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಂತರ ಮತ್ತೆ ಈ ಸಿನಿಮಾದ ಮೂಲಕ ಈ ಜೋಡಿ ಮಿಂಚಲು ರೆಡಿಯಾಗಿದ್ದಾರೆ.ರಶ್ಮಿಕಾ ಮಂದಣ್ಣ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನುವ ಸುದ್ದಿಗೆ ರಕ್ಷಿತ್ ಶೆಟ್ಟಿ ಕೊನೆಗೂ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದರು. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ಹೊರ ಹೋಗಿದ್ದ ರಕ್ಷಿತ್ ಶೆಟ್ಟಿ ಕಳೆದ ಮಂಗಳವಾರ ಸಂಜೆ ಮತ್ತೆ ವಾಪಸ್ ಬಂದು ಅಭಿಮಾನಿಗಳಿಗೆ ದೀರ್ಘ ಪತ್ರವನ್ನು ಬರೆಯುವ ಮೂಲಕ ಸ್ಪಷ್ಟನೆ ನೀಡಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


