ಬೆಂಗಳೂರು: ಪುಂಡ ಅಳಿಯನೊಬ್ಬ ನಡು ರಸ್ತೆಯಲ್ಲಿಯೇ ಹೆಣ್ಣು ಕೊಟ್ಟ ಅತ್ತೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಗರದ ಬ್ಯಾಟರಾಯನಪುರದಲ್ಲಿ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಬಾಬು ಎಂಬಾತನೇ ಅತ್ತೆ ಲಿಂಗರತ್ನಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಬಾಬು ವರದಕ್ಷಿಣೆಗೆ ಬೇಡಿಕೆ ಇಟ್ಟು ಪತ್ನಿ ಅನಿತಾರನ್ನು ತವರು ಮನಗೆ ಕಳುಹಿಸಿದ್ದನು. ತವರು ಮನೆ ಸೇರಿದ ಖಾಸಗಿ ಕಂಪೆನಿಯ ಉದ್ಯೋಗಿಯಾಗಿರುವ ಅನಿತಾ ಗಂಡನ ಮನೆಗೆ ಹಿಂದಿರುಗಿರಲಿಲ್ಲ.ಪತ್ನಿ ವರದಕ್ಷಿಣೆ ತೆಗೆದುಕೊಂಡು ಮನೆಗೆ ಹಿಂದಿರುಗದಕ್ಕೆ ಕೋಪಗೊಂಡ ಬಾಬು ಏಕಾಏಕಿ ಅತ್ತೆ ಮನೆಗೆ ನುಗ್ಗಿದ್ದಾನೆ. ಈ ವೇಳೆ ಅತ್ತೆ ಮತ್ತು ಅಳಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಕೋಪಗೊಂಡ ಬಾಬು ಅತ್ತೆಯೇ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಅನಿತಾ ಕುಟುಂಬಸ್ಥರು ಬಾಬು ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


