ಕೊಪ್ಪಳ: ಮದುವೆ ನಂತರವೂ ಸಂಬಂಧ ಬೆಳೆಸಿದ್ದ ಪ್ರೇಮಿಗಳಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.ಕೊಪ್ಪಳ ತಾಲೂಕು ಕಾಸನಕಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ ಮತ್ತು ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮಂಜುನಾಥ ಮತ್ತು ಲಕ್ಷ್ಮೀ ಪ್ರೀತಿಸುತ್ತಿದ್ದು, ಮಂಜುನಾಥಗೆ ಕೆಲ ವರ್ಷದ ಹಿಂದೆ ಮದುವೆಯಾಗಿತ್ತು. ಮದುವೆ ನಂತರವೂ ಇಬ್ಬರೂ ಸಂಬಂಧ ಮುಂದುವರೆಸಿದ್ದರು.ಲಕ್ಷ್ಮೀ ಮನೆಯಲ್ಲಿ ವಿಷಯ ಗೊತ್ತಾಗಿದ್ದು, ಶುಕ್ರವಾರ ರಾತ್ರಿ ಲಕ್ಷ್ಮೀ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿದ ಮಂಜುನಾಥ್ ಇದು ನನ್ನ ತಲೆಗೆ ಬರುತ್ತೆ ಎಂದು ತಾನೂ ಕೂಡ ಹೊಲಕ್ಕೆ ಹೋಗಿ ಆತನೂ ಕೂಡ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.ಆದರೆ ಲಕ್ಷ್ಮೀ ಪೋಷಕರು ಯಾರಿಗೂ ಮಾಹಿತಿ ನೀಡದೇ ಆಕೆಯ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಕೇವಲ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮುನಿರಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಲಕ್ಷ್ಮೀ ಆತ್ಮಹತ್ಯೆ ಬಗ್ಗೆ ಮುಚ್ಚಿಹಾಕಿದ್ದರು. ನಂತರ ಲಕ್ಷ್ಮೀ ಕೂಡ ಸಾವಿಗೀಡಾಗಿದ್ದಾಳೆ ಎಂದು ಮಾಹಿತಿ ತಿಳಿದ ಪೊಲೀಸರು ಕೂಡಲೇ ಗ್ರಾಮಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


