ಮೈಸೂರು: ಖದೀಮರು ವ್ಯಕ್ತಿಯೊಬ್ಬರ ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಮೈಸೂರು ಮೂಲದ ವ್ಯಕ್ತಿಯಾದ ಗೌತಮ್ ಎಂಬವರ ಅಕೌಂಟ್‍ನಲ್ಲಿ ನಕಲಿ ಎಟಿಎಂ ಕಾರ್ಡ್ ಬಳಸಿ ಚನ್ನಪಟ್ಟಣದ ಎಟಿಎಂ ನಲ್ಲಿ ಹಣ ಡ್ರಾ ಮಾಡಿದ್ದಾರೆ. ಹಿನಕಲ್ ನ ಕೆನರಾ ಬ್ಯಾಂಕ್ ನಲ್ಲಿ ಗೌತಮ್ ಖಾತೆ ಹೊಂದಿದ್ದು, ಖಾತೆಯಲ್ಲಿ 31,500 ರೂ. ಹಣ ಇತ್ತು. ಅದನ್ನು ನಕಲಿ ಎಟಿಎಂ ಕಾರ್ಡ್ ಬಳಸಿ ಎಟಿಎಂ ನಿಂದ ಡ್ರಾ ಮಾಡಲಾಗಿದೆ.ಬಳಿಕ ಚನ್ನಪಟ್ಟಣದ ಎಟಿಎಂವೊಂದರಲ್ಲಿ ಹಣ ಡ್ರಾ ಆಗಿರುವ ಬಗ್ಗೆ ಗೌತಮ್‍ನ ಮೊಬೈಲ್‍ಗೆ ಮೆಸೇಜ್ ಬಂದಿದೆ. ಹಣ ಡ್ರಾ ಆಗಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಕೂಡ ಖಚಿತಪಡಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಇದೇ ರೀತಿ ಮೂರ್ನಾಲ್ಕು ಜನರ ಖಾತೆಯಿಂದ ಹಣ ಡ್ರಾ ಮಾಡಲಾಗಿದೆ. ಈ ಸಂಬಂಧ ಗೌತಮ್ ಮೈಸೂರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


