ಬೆಂಗಳೂರು: ನಟ ಕಿಚ್ಚ ಸುದೀಪ್ ಮನೆಗೆ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ ನೀಡಿದ್ದು, ಈ ಬಗ್ಗೆ ನಮ್ಮ ಮನೆಯಲ್ಲಿ ಈಗ ಚಿನ್ನವಿದೆ. ನಾನು ಶ್ರೀಮಂತನಾಗಿದ್ದೇನೆ ಎಂದು ನಟ ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.ನಟ ಸುದೀಪ್ ಮತ್ತು ಗಣೇಶ್ ಭೇಟಿಯಾಗಿದ್ದಾರೆ. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದು, “ನಾನು ಗಣೇಶ್ ಜೊತೆ ಮಾತನಾಡುತ್ತಿದ್ದಾಗ ಗಣೇಶ್ ನಮ್ಮ ಸಂಬಂಧಿ ಎಂದು ಗೊತ್ತಾಯಿತು. ಈಗ ನಮ್ಮ ಮನೆಯಲ್ಲೂ ಚಿನ್ನ ಇದೆ. ನಾನು ಕೂಡ ಶ್ರೀಮಂತನಾಗಿದ್ದೇನೆ” ಎಂದು ಬರೆದು ಎರಡು ನಗು ಎಮೋಜಿಯನ್ನು ಹಾಕಿ ಗಣೇಶ್ ಮತ್ತು ಅವರ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.Guess what,,,, over a conversation I get to know that Ganesh is my relative … ????????… now I have gold at home… rich am I !!! Cheers n mch luv. pic.twitter.com/hfYilcnFq9— Kichcha Sudeepa (@KicchaSudeep) September 14, 2018ಇತ್ತೀಚೆಗೆ ಕೊಡಗು ಸಂತ್ರಸ್ತರಿಗಾಗಿ ಸ್ಯಾಂಡಲ್‍ವುಡ್ ಸ್ಟಾರ್ ಗಳು ಕರ್ನಾಟಕ ಚಲನಚಿತ್ರ ಕಪ್(ಕೆಸಿಸಿ) ಕ್ರಿಕೆಟ್ ಆಟವನ್ನು ಆಡಿದ್ದರು. ಎರಡು ದಿನಗಳ ಕಾಲ ಕೆಸಿಸಿ ನಡೆದಿದ್ದು, ಸ್ಟಾರ್ ನಟರು ಭಾಗಹಿಸಿದ್ದರು. ಈ ಆಟದಲ್ಲಿ ಗಣೇಶ್ ತಂಡ ಗೆಲುವನ್ನು ಸಾಧಿಸಿತ್ತು. ಅಂದಿನಿಂದಲೂ ಗಣೇಶ್ ಮತ್ತು ಸುದೀಪ್ ನಡುವೆ ಸ್ನೇಹ ಇತ್ತು. ಆದರೆ ಕೆಸಿಸಿ ಆಟದಿಂದ ಇವರಿಬ್ಬರು ಮತ್ತಷ್ಟು ಹತ್ತಿರವಾಗಿದ್ದಾರೆ.ಸುದೀಪ್ ಮಾಡಿರುವ ಟ್ವೀಟನ್ನೇ ಗಣೇಶ್ ಅವರು ರೀಟ್ವೀಟ್ ಮಾಡಿದ್ದಾರೆ, ಸದ್ಯಕ್ಕೆ ಸುದೀಪ್ ‘ಅಂಬಿ ನಿಂಗ್ ವಯಸ್ಸಾಯ್ತೋ’, ‘ಪೈಲ್ವಾನ್’ ಮತ್ತು ತೆಲುಗಿನ ‘ಸೈರಾ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಗಣೇಶ್ ‘ಆರೆಂಜ್’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


