ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರುಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಇತ್ತೀಚಿಗೆ ಲಂಬೋರ್ಗಿಯ ಕಾರ್ ರಸ್ತೆಗಿಳಿದು ಧೂಳೆಬ್ಬಿಸಿತ್ತು. ಈಗ ಮೊತ್ತೊಂದು ಕಾರ್ ಚಾಲನೆ ಮಾಡುವ ಮೂಲಕ ದರ್ಶನ್ ಧೂಳೆಬ್ಬಿಸಿದ್ದಾರೆ.ಇದೀಗ ದರ್ಶನ್ ಅವರು ಸ್ಪೋರ್ಟ್ಸ್ ಕಾರನ್ನು ಚಲಾಯಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ದರ್ಶನ್ ಡ್ರೈವ್ ಮಾಡುತ್ತಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಹೀಗಾಗಿ ಈ ವಿಡಿಯೋ ಇದೀಗ ಎಲ್ಲಾ ಕಡೆ ಹರಿದಾಡುತ್ತಿದೆ.ಗುರುವಾರ ಮೈಸೂರಿಗೆ ದರ್ಶನ್ ಹೋಗಿದ್ದು, ಅಲ್ಲಿ ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿರ್ಜನ ಪ್ರದೇಶವೊಂದರಲ್ಲಿ ದರ್ಶನ್ ಕಾರ್ ಚಲಾಯಿಸಿದ್ದು, ಕಾರ್ ರೇಸರ್ ಗಳಂತೆ ಮಣ್ಣಿನ ರಸ್ತೆಯಲ್ಲಿಯೇ ಅತೀವೇಗದಲ್ಲಿ ಚಲಾಯಿಸಿದ್ದಾರೆ. ಅಷ್ಟೇ ಅಲ್ಲದೇ ಅನೇಕ ಬಾರಿ ತಿರುವು ಮಾಡಿಕೊಂಡು ವೇಗವಾಗಿ ಕಾರನ್ನು ಓಡಿಸಿದ್ದಾರೆ. ಅವರು ಚಲಾಯಿಸಿದ ರಭಸಕ್ಕೆ ಮಣ್ಣಿನ ರಸ್ತೆಯಾದ ಕಾರಣ ಧೂಳೆದ್ದಿದೆ.ದರ್ಶನ್ ಯಾವುದೇ ಶೂಟಿಂಗ್ ಗಾಗಿ ಸ್ಪೋರ್ಟ್ಸ್ ಕಾರನ್ನು ಚಾಲನೆ ಮಾಡಿಲ್ಲ. ಆದರೆ ಇತ್ತೀಚೆಗೆ ದರ್ಶನ್ ಅಂತರಾಷ್ಟ್ರಿಯ ಮಟ್ಟದ ಕಾರ್ ರೇಸಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿತ್ತು. ಆದ್ದರಿಂದ ಅಲ್ಲಿ ಭಾಗವಹಿಸಲು ಕಾರು ಚಲಾಯಿಸಿ ತರಬೇತಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.ಈ ಹಿಂದೆ ದರ್ಶನ್ ಅವರು ಲಂಬೋರ್ಗಿಯ ಕಾರನ್ನು ಬೆಂಗಳೂರಿನಲ್ಲಿ ಚಲಾಯಿಸುವ ಮೂಲಕ ಎಲ್ಲರನ್ನು ಆಕರ್ಷಣೆ ಮಾಡಿದ್ದರು. ಈಗ ಸ್ಪೋರ್ಟ್ಸ್ ಕಾರನ್ನು ಚಲಾಯಿಸುವುದರ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ದರ್ಶನ್ ಬಳಿ ಈಗಾಗಲೇ ಲಂಬೋರ್ಗಿನಿ, ಮಿನಿ ಕೂಪರ್, ಫಾರ್ಚೂನರ್, ಬೆಂಜ್, ರೇಂಜ್ ರೋವರ್, ಐ-20, ಆಡಿ ಕ್ಯೂ 7, Porsche, ಜಾಗ್ವಾರ್, ಸೇರಿದಂತೆ ಹಲವು ಕಾರ್ ಗಳಿವೆ.ಸದ್ಯಕ್ಕೆ ದರ್ಶನ್ ಬಹುನಿರೀಕ್ಷಿತ ‘ಕುರುಕ್ಷೇತ್ರ’ ಸಿನಿಮಾ ಮುಗಿಸಿದ್ದು, ಈಗ ‘ಯಜಮಾನ’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv#ಡಿಬಾಸ್ ಅವರು ಇಚ್ಛಿಚಿಗಷ್ಟೇ ಖರೀದಿಸಿದ ಸ್ಫೋರ್ಟ್ ಕಾರ್ ಅನ್ನು ಡ್ರೈವಿಂಗ್ ಮಾಡುತ್ತಿರುವ ವಿಡಿಯೋ ನೋಡಿ ಶೇರ್ ಮಾಡಿ ???????? #Dboss #ChallengingStarDarshan #Sports #Car #Driving @dasadarshan @AICSDF pic.twitter.com/jQVbkRqqPw— All India Challenging Star Darshan Fans (@AICSDF) September 14, 2018Sign in to your account
Username or Email Address


Password

 Remember Me


