ಉಡುಪಿ: ಮಂಡ್ಯದ ಏಳು ಮಂದಿ ಶಾಸಕರು ಕೇವಲ ಶಾಸಕರಲ್ಲ. ನಾವೆಲ್ಲಾ ಸಿಎಂ ಕುಮಾರಸ್ವಾಮಿಯವರ ಬಾಡಿಗಾರ್ಡ್ ಗಳು. ನಮ್ಮ ಶರ್ಟ್ ಮುಟ್ಟಲು ನಿಮಗೆ ತಾಕತ್ ಇದ್ಯಾ ಅಂತ ಸಚಿವ ಪುಟ್ಟರಾಜು ಉಡುಪಿಯಲ್ಲಿ ಗುಡುಗಿದ್ದಾರೆ.ಉಡುಪಿ ಜೆಡಿಎಸ್ ಕಚೇರಿಗೆ ಆಗಮಿಸಿದ ಅವರು, ಕುಮಾರಸ್ವಾಮಿ ಯವರ ಬೆನ್ನಿಗೆ ಬೆನ್ನಾಗಿ ನಾವು ನಿಂತಿದ್ದೇವೆ. ಕಾಸಿನ ವಿಚಾರದಲ್ಲಿ ಬಿಜೆಪಿಯವರನ್ನು ಸಾಕಷ್ಟು ಗಿರಕಿ ಹೊಡೆಸಿದ್ದೇವೆ. ಮಂಡ್ಯದ ಶಾಸಕರು ಸಿಎಂಗೆ ಬಾಡಿಗಾರ್ಡ್ ಗಳು. ದುಡ್ಡಿಂದ ಆಗ್ಲಿ, ದರ್ಪದಿಂದ ಆಗ್ಲಿ ನಮ್ಮನ್ನು ಯಾರಿಂದಲೂ ಮುಟ್ಟೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.ಬಿಜೆಪಿಯವರ ದುಡ್ಡು ನಮ್ಮನ್ನು ಅಲುಗಾಡಿಸೋಕೆ ಅಸಾಧ್ಯ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತದೆ. ನನಗೆ ಸಣ್ಣ ನೀರಾವರಿ ಖಾತೆಯಲ್ಲಿ ಖುಷಿಯಿದೆ, ಜನಕ್ಕೆ ಖುಷಿ ಕೊಡುವ ಕೆಲಸ ಮಾಡುತ್ತೇನೆ ಎಂದರು.ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿ ಎಂಪಿ ಚುನಾವಣೆ ಎದುರಿಸಿದ್ರೆ 25 ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರ ಬಣ್ಣ ಬಯಲು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ಧ ಗುಡುಗಿದ ಅವರು, ಅವರದ್ದು ಸುಳ್ಳು ಕಥೆಕಟ್ಟಿ ಹಾರಾಡುವ ಪಕ್ಷ. ರಾಜ್ಯದಲ್ಲಿ ಬಿಜೆಪಿಗೆ ಮಾಧ್ಯಮಗಳ ಬೆಂಬಲ ಜಾಸ್ತಿಯಾಗಿದೆ ಎಂದು ಆರೋಪಿಸಿದರು.ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ. ನಮ್ಮ ಸರ್ಕಾರವನ್ನು ಐದು ವರ್ಷ ಸುಭದ್ರ ಯಾವ ನಿಂದ ಲ್ಲಿ ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು. ಪ್ರಧಾನಿ ಮೋದಿ ಉದ್ದುದ್ದ ಭಾಷಣ ಮಾಡ್ತಾರೆ ಆದ್ರೆ ಅವರ ಜನ ಕ್ಲಬ್ ನಲ್ಲಿ ದಂಧೆ ಮಾಡುವವರ ದುಡ್ಡು ಪಡೆಯುತ್ತಾರೆ ಎಂದು ದೂರಿದರು. 24 ಗಂಟೆಯಲ್ಲಿ ಕಿಂಗ್ ಪಿನ್ ಗಳ ಬಣ್ಣ ಬಯಲಾಗುತ್ತದೆ ಎಂದರು.ಜಿಲ್ಲಾ ಜೆಡಿಎಸ್ ಸಚಿವರಿಗೆ ಸನ್ಮಾನಿಸಿತು, ಈ ಸಂದರ್ಭ ಮಾತನಾಡಿದ ಅವರು, ಉಡುಪಿಯಲ್ಲಿ ಜೆಡಿಎಸ್ ಕಟ್ಟುವ ಕೆಲಸ ಶುರು ಮಾಡಿದ್ದೇವೆ. ಪಕ್ಷವನ್ನು ಬುಡದಿಂದ ಕಟ್ಟುವ ಕೆಲಸ ಮಾಡುತ್ತೇವೆ. ರೈತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮತ್ತಿತರ ನಾಯಕರು ಸಚಿವರ ಜೊತೆಗಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv






 Advertisement 




Sign in to your account
Username or Email Address


Password

 Remember Me


