ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೆಲ ಸಮಯ ಬಿಗುವಿನ ವಾತಾವರಣ ಉಂಟಾಗಿ ಪೆÇಲೀಸರು ಲಘು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಣ ಮಾಡಿದ ಘಟನೆ ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಬಳಿ ತಡರಾತ್ರಿ ನಡೆದಿದೆ.ಗಣೇಶ ಪ್ರತಿಷ್ಠಾನೆ ಸಲುವಾಗಿ ಡಿಜೆ ಹಚ್ಚಿ ಭಾರೀ ಮೆರವಣಿಗೆ ಮಾಡಲಾಗುತಿತ್ತು. ಒಬ್ಬ ಯುವಕ ಇನ್ನೊಬ್ಬ ಯುವಕನಿಗೆ ಕಾಲು ತಾಗಿದೆ. ಇದೇ ನೆಪದಿಂದ ಕಾಲು ತಾಗಿದ ಯುವಕ ಸ್ನೇಹಿತರು ಕಾಲು ತಾಗಿಸಿದ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.ಆಗ ಇಬ್ಬರೂ ಯುವಕರ ಕಡೆಯವರು ಪರಸ್ಪರ ಮಾತಿನ ಚಕಮಕಿ ನಡೆದು ಗಲಾಟೆ ಉಂಟಾಗಿ ಕೆಲ ಸಮಯ ವಾತಾವರಣ ತ್ವೇಷಮಯದಿಂದ ಕೂಡಿತ್ತು. ತಕ್ಷಣ ಪೊಲೀಸರು ಮಧ್ಯೆ ಪ್ರವೇಶ ಮಾಡಿ ಲಘು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಹಬದಿಗೆ ತಂದಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


