ಬೆಂಗಳೂರು: ಪ್ರಜ್ವಲ್ ದೇವರಾಜ್ ಇದೀಗ ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಸ್ ಕಥಾ ಹಂದರ ಹೊಂದಿರೋ ಈ ಚಿತ್ರದ ಬಗ್ಗೆ ಭಾರೀ ಹೋಪ್ ಇಟ್ಟುಕೊಂಡಿರೋ ಪ್ರಜ್ವಲ್ ಪಾಲಿಗಿದು ಟರ್ನಿಂಗ್ ಪಾಯಿಂಟಿನಂಥಾ ಚಿತ್ರ. ಇದೀಗ ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಪ್ರಜ್ವಲ್ ಮಡದಿ ರಾಗಿಣಿ ಚಂದ್ರನ್ ನಟಿಸಲಿದ್ದಾರೆಂಬ ಸುದ್ದಿ ಹೊರ ಬಿದ್ದಿದೆ!ಈ ಚಿತ್ರದಲ್ಲಿ ಇಡೀ ಕಥೆಯ ಮುಖ್ಯಬಿಂದುವಿನಂತಿರೋ ಅತಿಥಿ ಪಾತ್ರವೊಂದಿದೆಯಂತೆ. ಆದರೆ ಈ ಪಾತ್ರಕ್ಕಾಗಿ ನಿರ್ದೇಶಕ ವಿಖ್ಯಾತ್ ಯಾರನ್ನೂ ಆಯ್ಕೆ ಮಾಡಿಕೊಂಡಿರಲಿಲ್ಲ. ಇದೀಗ ಈ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಮಡದಿ ರಾಗಿಣಿ ನಟಿಸೋದೇ ಸೂಕ್ತ ಎಂಬ ತೀರ್ಮಾನಕ್ಕೆ ವಿಖ್ಯಾತ್ ಬಂದಿದ್ದಾರೆ.ಈ ಬಗ್ಗೆ ಪ್ರಜ್ವಲ್‍ಗೆ ಸಣ್ಣ ಸುಳಿವನ್ನೂ ಕೊಡದೇ ವಿಖ್ಯಾತ್ ಚಿತ್ರ ತಂಡದ ಜೊತೆ ಮಾತಾಡಿದ್ದಾರೆ. ಅತ್ತಲಿಂದಲೂ ರಾಗಿಣಿಯೇ ಸೂಕ್ತ ಎಂಬ ಅಭಿಪ್ರಾಯವೇ ಕೇಳಿ ಬಂದಿದೆ. ಇದಾದಾಕ್ಷಣವೇ ನೇರವಾಗಿ ರಾಗಿಣಿಯವರನ್ನೇ ಸಂಪರ್ಕಿಸಿದ್ದಾರೆ. ಬಳಿಕ ರಾಗಿಣಿ ಪ್ರಜ್ವಲ್ ಜೊತೆ ಮಾತಾಡಿ ನಟಿಸಲು ಒಪ್ಪಿಕೊಂಡಿದ್ದಾರಂತೆ.ರಾಗಿಣಿ ಕೂಡಾ ಮೂಲತಃ ಮಾಡೆಲಿಂಗ್ ಕ್ಷೇತ್ರದಿಂದ ಬಂದವರು. ಡ್ಯಾನ್ಸರ್ ಕೂಡಾ ಆಗಿರೋ ರಾಗಿಣಿಗೆ ಒಂದು ಹಂತದಲ್ಲಿಯಾದರೂ ನಟಿಯಾಗಬೇಕೆಂಬ ಆಸೆ ಮೊಳೆತಿರುತ್ತದೆ. ಆದರೀಗ ಅವರಿಗೆ ತಮ್ಮ ಪತಿ ಪ್ರಜ್ವಲ್ ಜೊತೆಗೇ ನಟಿಸೋ ಯೋಗ ಕೂಡಿ ಬಂದಿದೆ. ಈ ಮೂಲಕ ಅವರು ಮೊದಲ ಸಲ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ!ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.instagram.com/p/BkupBJPFAP-/?taken-by=prajwaldevarajSign in to your account
Username or Email Address


Password

 Remember Me


