ಬೆಂಗಳೂರು: ಗಣೇಶ ಹಬ್ಬ ಬಂದರೆ ಸಾಕು ಬೀದಿ ಬೀದಿಯಲ್ಲೂ ಗಣಪನನ್ನು ಕೂರಿಸಿ ಪೂಜೆ ಮಾಡಿ ಗಣೇಶ ಎಲ್ಲರಿಗೂ ಒಳ್ಳೇಯದನ್ನ ಮಾಡಪ್ಪ ಅಂತಾ ಬೇಡಿಕೊಳ್ಳತ್ತಾರೆ. ಹಾಗೆಯೇ ನಮ್ಮ ಸ್ಯಾಂಡಲ್‍ವುಡ್ ಸ್ಟಾರ್‍ಗಳು ಸಹ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಮಾಡಿದ್ದಾರೆ.ಹೌದು, ನಮ್ಮ ಚಂದನವನದ ಸ್ಟಾರ್ ದಂಪತಿಗಳ ಮನೆಯಲ್ಲೂ ಗಣಪನ ಆರಾಧನೆ ಜೋರಾಗಿಯೇ ನಡೆದಿದೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿದೇರ್ಶಕ ಪ್ರೇಮ್ ಮನೆಯಲ್ಲಿ ಗಣೇಶ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.ಉಪೇಂದ್ರ ನಿವಾಸದಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಸ್ಥಾಪಿಸಿ ಉಪೇಂದ್ರ ದಂಪತಿ ಒಟ್ಟಿಗೆ ಪೂಜೆ ಮಾಡಿದರು. ಮನೆ ಮಂದಿಯಲ್ಲಾ ಸೇರಿ ಈ ಹಬ್ಬವನ್ನ ನಾವು ಮಾಡುತ್ತೇವೆ. ನನಗೆ ಗಣೇಶ ಅಂದರೆ ತುಂಬಾ ಪ್ರೀತಿ. ನಾಡಿನ ಜನತೆಗ ಗಣಪ ಒಳ್ಳೆಯದನ್ನ ಮಾಡಲಿ ಅಂತಾ ಉಪ್ಪಿ ಶುಭಾಶಯಯವನ್ನು ಕೋರಿದ್ದಾರೆ. ಗಣೇಶ ಹಬ್ಬ ಮಾಡೋದಕ್ಕೆ ಬಹಳ ಖುಷಿಯಾಗುತ್ತೆ. ಮನೆ ಮಕ್ಕಳೆಲ್ಲ ಸೇರಿ ಹಬ್ಬವನ್ನ ಮಾಡ್ತಿವಿ ಅಂತಾ ಹಬ್ಬದ ಸಂಭ್ರಮದಲ್ಲಿದ್ದ ಪ್ರಿಯಾಂಕಾ ಉಪೇಂದ್ರ ತಿಳಿಸಿದರು.ಜೋಗಿ ಪ್ರೇಮ್ ಮನೆಯಲ್ಲೂ ಗಣೇಶನ ಸಂಭ್ರಾಮಚರಣೆ ಅದ್ಧೂರಿಯಾಗಿಯೇ ನಡೆದಿದ್ದು, ಪರಿಸರ ಸ್ನೇಹಿ ಗಣೇಶನಿಗೆ ರಕ್ಷಿತಾ ಪ್ರೇಮ್ ದಂಪತಿ ಗಣೇಶನಿಗೆ ಪೂಜೆ ಮಾಡಿದರು. ಜೊತೆಗೆ ಬಹು ನಿರೀಕ್ಷೆ ಹುಟ್ಟಿಸಿರೋ `ದಿ ವಿಲನ್’ ಸಿನಿಮಾ ರಿಲೀಸ್ ಡೇಟ್ ಅನ್ನ ವಿನಾಯಕನ ಸಮ್ಮುಖ ಅನೌನ್ಸ್ ಮಾಡಿದ ಜೋಗಿ ಪ್ರೇಮ್ ಅಕ್ಟೋಬರ್ 18 ರಂದು ರಾಜ್ಯಾದ್ಯಂತ ದಿ ವಿಲನ್ ಬಿಡುಗಡೆಯಾಗುತ್ತೆ. ಅಷ್ಟೇ ಅಲ್ಲದೇ ಕನ್ನಡ, ತೆಲುಗು, ತಮಿಳು, ಭಾಷೆಯಲ್ಲಿ ಏಕಕಾಲಕ್ಕೆ ತೆರಗೆ ಬರಲಿದೆ ಅಂತಾ ಅಭಿಮಾನಿಗಳಿಗೆ ಖುಷಿ ವಿಚಾರವನ್ನು ನೀಡಿದ್ದಾರೆ.ತೆರೆ ಮೇಲೆ ಮಿಂಚುವ ಸಿನಿ ನಟರು ತಮ್ಮ ಮನೆಯಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಸ್ಥಾಪಿಸಿ, ಅಲಾಂಕರ ಮಾಡಿ ಪೂಜೆ ಪುನಸ್ಕಾರ, ಹೋಮ ಹವನ ಮಾಡಿ ಭಗವಂತನ ಕೃಪೆಗೆ ಪಾತ್ರರಾದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


