-ವಿದ್ಯಾರ್ಥಿಯ ಪುಂಡಾಟಿಕೆ ಸಿಸಿ ಕ್ಯಾಮರಾದಲ್ಲಿ ಸೆರೆ!ಬಳ್ಳಾರಿ: ತರಗತಿಯಲ್ಲಿ ರೌಡಿಯಂತೆ ವರ್ತನೆ ಮಾಡಿದ ವಿದ್ಯಾರ್ಥಿಯನ್ನು ಥಳಿಸಿದ್ದಕ್ಕೆ ಪ್ರಿನ್ಸಿಪಾಲ್ ವಿರುದ್ಧವೇ ಪೋಷಕರು ಪೊಲೀಸರಿಗೆ ದೂರು ನೀಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.ಸಹಪಾಠಿಗಳ ಮೇಲೆ ಹಲ್ಲೆ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಮಾಸ್ಟರ್‌ಗೆ ಸಿಟ್ಟು ಬಂದಿದೆ. ಜಿಲ್ಲೆಯ ಬ್ರಹ್ಮ ಚೈತ್ಯನ್ಯ ಶಾಲೆಯ 8 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ತರಗತಿಯಲ್ಲಿನ ಇತರೆ ವಿಧ್ಯಾರ್ಥಿಗಳ ಮೇಲೆ ನಿತ್ಯ ಹಲ್ಲೆ ಮಾಡುತ್ತಿದ್ದ. ವಿದ್ಯಾರ್ಥಿಯ ಈ ಪುಂಡಾಟಿಕೆಯನ್ನು ಪ್ರಶ್ನೆ ಮಾಡಿದಕ್ಕೆ ವಿದ್ಯಾರ್ಥಿಯ ಪೋಷಕರು ಇದೀಗ ಪ್ರಿನ್ಸಿಪಾಲ್ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಖಾಸಿಂ ರಜಾಕ್ ಮಾಡಿದ ಪುಂಡಾಟಿಕೆ ಶಾಲೆಯಲ್ಲಿದ್ದ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ ಶಾಲೆಯ ಶಿಕ್ಷಕರು ಹಾಗೂ ಪ್ರಿನ್ಸಿಪಾಲ್ ವಿದ್ಯಾರ್ಥಿಗೆ ಸ್ವಲ್ಪ ಹೆಚ್ಚು ಎನ್ನುವಂತೆ ಥಳಿಸಿ ಬುದ್ಧಿ ಹೇಳಿದರು. ಇದನ್ನೇ ತಪ್ಪಾಗಿ ತಿಳಿದ ಪೋಷಕರು ಪೊಲೀಸ್ ಠಾಣೆಯ ಮೇಟ್ಟಿಲೇರಿದ ನಂತರ ಪ್ರಿನ್ಸಿಪಾಲ್ ವಿದ್ಯಾರ್ಥಿಯ ಪುಂಡಾಟಿಕೆಗೆ ಬುದ್ಧಿ ಹೇಳಿದ್ದೆ ತಪ್ಪಾಯ್ತು ಅಂತಿದ್ದಾರೆ.ವಿದ್ಯಾರ್ಥಿಗೆ ಥಳಿಸಿದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಿನ್ಸಿಪಾಲ್ ವಿದ್ಯಾರ್ಥಿಯ ಪುಂಡಾಟಿಕೆಯ ವಿಡಿಯೋ ನೋಡಿದ ನಂತರ ಪೋಷಕರು ಇದೀಗ ರಾಜಿ ಸಂಧಾನ ಮಾಡಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


