ಮಂಡ್ಯ: ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ವಿವಿ ನಗರದಲ್ಲಿ ನಡೆದಿದೆ.ರಕ್ಷಿತಾ(19) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಮೂಲತಃ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದವರಾದ ರಕ್ಷಿತಾ ತನ್ನದೇ ಗ್ರಾಮದ ಕೀರ್ತಿರಾಜ್ ನನ್ನು ಪ್ರೀತಿಸಿ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.ರಕ್ಷಿತಾ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಜೊತೆ ವಾಪಸ್ ಬರುವಂತೆ ಮಗಳಿಗೆ ತಿಳಿ ಹೇಳಿದ್ದರು. ಆದರೆ ತಾನು ಪ್ರೀತಿಸಿದ ಹುಡುಗನ ಜೊತೆಯೇ ಬಾಳುವೆ ಮಾಡುವುದಾಗಿ ತಿಳಿಸಿದ್ದ ರಕ್ಷಿತಾ, ಮದ್ದೂರು ಪಟ್ಟಣದಲ್ಲಿ ಗಂಡನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.ಆದರೆ ಈಗ ಗೌರಿ ಹಬ್ಬದ ದಿನವೇ ರಾತ್ರಿ ರಕ್ಷಿತಾ ನೇಣಿಗೆ ಶರಣಾಗಿದ್ದಾಳೆ. ಇತ್ತ ರಕ್ಷಿತಾ ಗಂಡ ಕೀರ್ತಿರಾಜ್ ನಾಪತ್ತೆಯಾಗಿದ್ದು, ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ವಿಷಯ ಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಶ್ರೀರಂಗಪಟ್ಟಣ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


