ಕೊಪ್ಪಳ: ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಪ್ರಯಾಣ ಮಾಡಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.ಬಸವರಾಜ ರಾಯರೆಡ್ಡಿ ಅವರು ರಾಹುಲ್ ಗಾಂಧಿ ಜೊತೆಗೆ ಕೈಲಾಸನಾಥ ಪರ್ವತ ಪ್ರವಾಸ ಕೈಗೊಂಡ ಫೋಟೋ ವೈರಲ್ ಆಗಿವೆ. ಇದರಿಂದಾಗಿ ರಾಯರೆಡ್ಡಿ ಅವರು ಲೋಕಸಭೆ ಟಿಕೇಟ್ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೇ ರಾಹುಲ್ ಗಾಂಧಿ ಜೊತೆ ಪ್ರವಾಸ ಮಾಡಿರಬಹುದು ಎನ್ನುವ ಮಾತನ್ನು ಜಿಲ್ಲೆಯ ಕಾಂಗ್ರೆಸ್ ನಾಯಕರು ಆಡಿಕೊಳ್ಳುತ್ತಿದ್ದಾರೆ.2018ರ ವಿಧಾನಸಭೆ ಚುನಾವಣೆ ಸೋಲಿನ ಕಹಿ ಅನುಭವ ಮರೆಯಲು ಕೈಲಸನಾಥ ದರ್ಶನ ಮಾಡುತ್ತಿರುವೆ ಎಂದು ರಾಯರೆಡ್ಡಿ ಹೇಳಿದ್ದರು. ಇತ್ತ ರಾಹುಲ್ ಗಾಂಧಿ ಭೇಟಿ ಆಕಸ್ಮಿಕ ಅಂತಾ ರಾಯರೆಡ್ಡಿ ಹೇಳಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


