ಬೆಂಗಳೂರು: ಬಾಲಿವುಡ್ ಫೇಮಸ್ ನಟ ಬಿಗ್ ಬಿ ಅವರ ಪುತ್ರ ಅಭಿಷೇಕ್ ಬಚ್ಚನ್ ‘ನನ್ನ ತಂದೆ ಕರುನಾಡ ಚಕ್ರವರ್ತಿ ಡಾ. ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್’ ಎಂದು ಅಣ್ಣಾವ್ರ ಬಗೆಗಿನ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅಣ್ಣಾವ್ರನನ್ನು ನೆನೆದು ತಂದೆ ಮತ್ತು ಅವರ ನಡುವೆ ಇದ್ದ ಒಡನಾಟದ ಬಗ್ಗೆ ಮಾತನಾಡಿದ್ದಾರೆ.ಅಭಿಷೇಕ್ ಬಚ್ಚನ್ ಅವರು ‘ಮನ್ ಮರ್ಜಿಯಾ’ ಹೊಸ ಸಿನಿಮಾ ಮಾಡಿದ್ದು, ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಸೌತ್ ಸಿನಿಮಾ ನಟರ ಬಗ್ಗೆ ಮಾತಾನಾಡುತ್ತಾ ಅಣ್ಣಾವ್ರ ಬಗ್ಗೆ ಮಾತಾನಾಡಿದ್ದಾರೆ. ನನ್ನ ತಂದೆ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್ ಆಗಿದ್ದು, ಅವರನ್ನು ಕಂಡರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.ಸ್ವತಃ ತಂದೆಯೇ ನಾನು ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದರು. ನನ್ನನ್ನು ಒಂದೆರೆಡು ಬಾರಿ ರಾಜ್ ಕುಮಾರ್ ಸರ್ ಅವರನ್ನು ಭೇಟಿ ಮಾಡಿಸಿದರು. ಆಗ ನಾನಿನ್ನು ಚಿಕ್ಕವನು. ಅವರ ನಟನೆ ಎಂದರೆ ತಂದೆಗೆ ತುಂಬಾ ಇಷ್ಟ. ಅವರ ಮಕ್ಕಳು ಒಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ತಂದೆ ಹೇಳಿದ್ದರು. ನಾನು ಸೌತ್ ಸಿನಿಮಾಗಳನ್ನು ನೋಡಿದ್ದೇನೆ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.ಈ ಹಿಂದೆ ಅಮಿತಾಬ್ ಬಚ್ಚನ್, ಹಿಂದಿ ಚಿತ್ರರಂಗಕ್ಕೆ ರಾಜ್‍ಕುಮಾರ್ ಬಾರದೇ ಇದ್ದದ್ದು ಒಳ್ಳೆಯದಾಯಿತು. ಅವರು ಬಂದಿದ್ದರೆ ನಮಗೆ ಸಿನಿಮಾಗಳೇ ಸಿಗುತ್ತಿರಲಿಲ್ಲ ಎಂದು ಅಣ್ಣಾವ್ರ ಬಗ್ಗೆ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದರು. ಈಗಲೂ ಕೂಡ ಬಿಗ್ ಬಿ ರಾಜ್‍ಕುಮಾರ್ ಅವರ ಕುಟುಂಬದೊಂದಿಗೆ ಒಳ್ಳೆಯ ಸಂಪರ್ಕವನ್ನು ಹೊಂದಿದ್ದು ಒಂದು ಜಾಹೀರಾತಿನಲ್ಲಿ ಬಿಗ್ ಬಿ ಹಾಗೂ ಶಿವಣ್ಣ ಒಟ್ಟಿಗೆ ನಟಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


