ಬೆಂಗಳೂರು: ಕಿಚ್ಚನ ಬರ್ತ್ ಡೇ ದಿನವೇ ಪೈಲ್ವಾನ್ ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಿತ್ತು. ಇದರಲ್ಲಿ ಸುದೀಪ್ ಲುಕ್ಕು, ದೇಹ ಸೌಷ್ಠವ ಕಂಡು ಅವರ ಅಭಿಮಾನಿಗಳೆಲ್ಲ ಹುಚ್ಚೆದ್ದಿದ್ದರು. ತೆಳ್ಳಗಿನ ದೇಹವನ್ನೇ ಮೇಂಟೇನು ಮಾಡಿಕೊಂಡು ಬಂದಿದ್ದ ಸದೀಪ್ ಕಟ್ಟುಮಸ್ತಾದ ದೇಹಸಿರಿಯೊಂದಿಗೆ ಪಳಗಿದ ಪೈಲ್ವಾನನಂತೆಯೇ ಕಾಣಿಸಿಕೊಂಡಿದ್ದರು.ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಯಾವ ನಟರೂ ಜಿಮ್ಮಿಗೆ ಹೋಗಿ ಅದೇನೇ ದೈಹಿಕ ಕಸರತ್ತುಗಳನ್ನು ನಡೆಸಿದರೂ ಸುದೀಪ್ ಮಾತ್ರ ಆ ಬಗ್ಗೆ ಅಪ್ಪಿತಪ್ಪಿಯೂ ಯೋಚಿಸಿರಲಿಲ್ಲ. ಆದರೆ ಅಂಥಾ ಸುದೀಪ್ ಈ ಚಿತ್ರಕ್ಕಾಗಿ ಜಿಮ್‍ನಲ್ಲಿ ಬೆವರಿಳಿಸಿದ್ದಾರೆ. ಸರಿಕಟ್ಟಾದ ದೇಹವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಸುದೀಪ್ ಅವರ ದೇಹದಲ್ಲಾಗಿರೋ ಇಂಥಾ ಅಚ್ಚರಿದಾಯಕ ಬೆಳವಣಿಗೆಯ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರೋ ವ್ಯಕ್ತಿಯೊಬ್ಬರಿದ್ದಾರೆ. ಆತ ಹಾಲಿವುಡ್‍ನ ನಂಬರ್ ಒನ್ ಸ್ಟಂಟ್ ಮಾಸ್ಟರ್ ಲರ್ನೆಲ್ ಸ್ಟೋವೆಲ್!ಲರ್ನೆಲ್ ಸ್ಟೋವೆಲ್ ಹಾಲಿವುಡ್‍ನ ಖ್ಯಾತ ಸಾಹಸ ನಿರ್ದೇಶಕ. ಮೈ ನವಿರೇಳಿಸುವ, ಒಂಚೂರು ಯಾಮಾರಿದರೂ ಜೀವವೇ ಹೋಗುವಂಥಾ ಸಾಹಸಗಳನ್ನು ಸೇಫ್ ಆಗಿ ಮಾಡೋ ಮೂಲಕ ಈತ ವಿಶ್ವದ ಶ್ರೇಷ್ಠ ಸಾಹಸ ನಿರ್ದೇಶಕ ಅನ್ನಿಸಿಕೊಂಡಿದ್ದಾರೆ. ಫೈಟಿಂಗ್ ಮತ್ತು ಮಾರ್ಷಲ್ ಆಟ್ರ್ಸ್‍ನಲ್ಲಿ ಖ್ಯಾತರಾಗಿರೋ ಸ್ಟೋವೆಲ್ ಪೈಲ್ವಾನ್ ಚಿತ್ರದ ಸಾಹಸ ನಿರ್ದೇಶಕ.ಈ ಚಿತ್ರಕ್ಕಾಗಿ ಖುದ್ದು ಸ್ಟೋವೆಲ್ ಅವರೇ ಸುದೀಪ್‍ರನ್ನು ಕಟ್ಟುಮಸ್ತಾದ ದೇಹದೊಂದಿಗೆ ತಯಾರು ಮಾಡಿದ್ದಾರೆ. ಇವರ ಕಾರಣದಿಂದಲೇ ಸುದೀಪ್ ಭಿನ್ನವಾದ ಲುಕ್ಕಿನಲ್ಲಿ ಅಬ್ಬರಿಸಿದ್ದಾರೆ. ಇಡೀ ಚಿತ್ರದಲ್ಲಿ ಹಾಲಿವುಡ್ಡನ್ನೇ ಮೀರಿಸುವಂಥಾ ಸ್ಟಂಟ್ ಕಸರತ್ತುಗಳನ್ನು ಸ್ಟೋವೆಲ್ ನಡೆಸಿದ್ದಾರಂತೆ!ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


