ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿಯ ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಇತ್ತ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ತಿರುಗೇಟು ನೀಡಲು ಮುಂದಾಗಿದ್ದರಿಂದ ಬಿಜೆಪಿ ನಾಯಕರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ಸಚಿವ ಡಿ.ಕೆ.ಶಿವಕುಮಾರ್, ಬಿಜೆಪಿ ಶಾಸಕರೇ ನಮ್ಮ ವಶದಲ್ಲಿದ್ದಾರೆ. ಅವರು ಒಂದು ಪಾನ್ ಮೂವ್ ಮಾಡಲಿ ಮುಂದೇನು ಮಾಡಬೇಕೆಂದು ನಮಗೆ ಗೊತ್ತಿದೆ ಅಂತಾ ಹೇಳಿರೋದು ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ ಎನ್ನಲಾಗುತ್ತಿದೆ. ಹಾಗಾದ್ರೆ ನಿಜವಾಗಲೂ ಬಿಜೆಪಿ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದರಾ ಎಂಬ ಪ್ರಶ್ನೆಯೊಂದು ಮೂಡಿದೆ.ಇತ್ತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ 6 ಮಂದಿ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತಾ ಹೇಳಿದ್ದಾರೆ. ಹೆಚ್‍ಡಿಕೆ ಹೇಳಿಕೆ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಚೌತಿ ನಂತರ ಸ್ವಲ್ಪ ಹುಷಾರಾಗಿರಿ, ಯಾರಿಗೂ ಹೆದರಬೇಡಿ. ನಿಮ್ಮನ್ನ ಯಾವಾಗ ಬೇಕಾದರೂ ನಾವು ಸಂಪರ್ಕ ಮಾಡುತ್ತೇವೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ, ಏನೇ ಆದ್ರು ನಮಗೆ ಕಾಲ್ ಮಾಡಿ ಎಂದು ಎಲ್ಲಾ ಬಿಜೆಪಿ ಶಾಸಕರಿಗೆ ರಕ್ಷಣಾತ್ಮಕ ಸಂದೇಶ ರವಾನಿಸಿದ್ದಾರಂತೆ.ಮಂಗಳವಾರ ನಡೆದ ಬಿಜೆಪಿ ಸಭೆಯಲ್ಲಿ ಆಪರೇಷನ್ ಕಮಲದ ಬಗ್ಗೆ ಚರ್ಚೆ ಆಗಿದೆ ಅಂತೆ. ಸರ್ಕಾರದ ಮಟ್ಟದಲ್ಲಿ ಗೊಂದಲಗಳಿದ್ದು, ಯಾವುದಕ್ಕೂ ಸಿದ್ಧರಾಗಿರುವಂತೆ ಬಿಎಸ್‍ವೈ ಸೂಚಿಸಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸರ್ಕಾರ ರಚಿಸುವುದಾಗಿಯೂ ಆಪ್ತ ಶಾಸಕರಿಗೆ ಯಡಿಯೂರಪ್ಪ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ, ಆಪರೇಷನ್ ಕಮಲಕ್ಕೆ ಬಿಜೆಪಿ ಮಾಡಿರೋ ಪ್ಲಾನ್ ಏನು..?ಆಪರೇಷನ್ ಕಮಲ – ಹಂತ 1
* ಮೊದಲ ಹಂತದಲ್ಲಿ 11 ಮಂದಿ ಶಾಸಕರ ಸೆಳೆಯಲು ಪ್ಲಾನ್
* ಉ.ಕರ್ನಾಟಕದ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಗಾಳಆಪರೇಷನ್ ಕಮಲ – ಹಂತ 2
* 2ನೇ ಹಂತದಲ್ಲಿ 4 ಶಾಸಕರನ್ನು ಸೆಳೆಯಲು ಯತ್ನ
* ಬೆಂಗಳೂರು ಹತ್ತಿರದ 2 ಜಿಲ್ಲೆಗಳ ಶಾಸಕರನ್ನು ಸೆಳೆಯಲು ಪ್ಲಾನ್
* ಇಲ್ಲೂ ಕೂಡ ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಗಾಳಆಪರೇಷನ್ ಕಮಲ – ಹಂತ 3
* 3ನೇ ಹಂತದಲ್ಲಿ ನಾಲ್ವರು ಶಾಸಕರನ್ನು ಸೆಳೆಯಲು ತಂತ್ರ
* ಮಧ್ಯ ಕರ್ನಾಟಕ, ಹೈದ್ರಾಬಾದ್ ಶಾಸಕರಿಗೆ ಸ್ಕೆಚ್
* ಈ ಗ್ರೂಪಲ್ಲಿ ಕಾಂಗ್ರೆಸ್ ಶಾಸಕರಿಗೆ ಮಾತ್ರ ಗಾಳಆಪರೇಷನ್ ಕಮಲ – ಹಂತ 4
* 4ನೇ ಹಂತದಲ್ಲಿ ಮೂವರು ಶಾಸಕರಿಗೆ ಬಿಜೆಪಿ ಗಾಳ
* ಬೆಂಗಳೂರು, ಮಲೆನಾಡು ಭಾಗದ ಶಾಸಕರಿಗೆ ಆದ್ಯತೆ
* ಇಲ್ಲಿ ಕೂಡ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆದ್ಯತೆಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


