ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೈಮಾನಿಕ ತರಬೇತಿ ಕೇಂದ್ರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ರ‍್ಯಾಗಿಂಗ್ ಆದ ಮೇಲೆ ಇದೀಗ ವಿದ್ಯಾರ್ಥಿನಿಯರಿಗೆ ವಿಮಾನದಲ್ಲಿಯೇ ಅವರ ಪ್ರೈವೇಟ್ ಪಾರ್ಟ್ ಮುಟ್ಟಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ.ಮುಖ್ಯ ತರಬೇತುದಾರ ಅಮರ್ ಜೀತ್ ಸಿಂಗ್ ಡಾಂಗೆ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿದೆ. ಮುಖ್ಯ ತರಬೇತುದಾರನಿಂದಲ್ಲೇ ಲೈಂಗಿಕ ಕಿರುಕುಳ ನೀಡುತ್ತಿದ್ದು, ವಿಮಾನದಲ್ಲಿ ಟ್ರೈನಿಂಗ್ ನೀಡುವಾಗ ಅಮರ್ ಜೀತ್ ಸಿಂಗ್ ಡಾಂಗೆ ವಿದ್ಯಾರ್ಥಿನಿಯರ ಪ್ರೈವೇಟ್ ಪಾರ್ಟ್ ಗೆ ಹೊಡಿತಾನೆ ಎಂಬ ಆರೋಪ ಕೇಳಿ ಬಂದಿದೆ.ವಿದ್ಯಾರ್ಥಿನಿ ತನಗೆ ಆಗಿರುವ ಅನ್ಯಾಯವನ್ನು ತನ್ನ ಸ್ನೇಹಿತೆ ಜೊತೆ ಫೋನಿನಲ್ಲಿ ಶೇರ್ ಮಾಡಿಕೊಳ್ಳುತ್ತಿರುವ ಆಡಿಯೋ ಪಬ್ಲಿಕ್ ಟವಿಗೆ ಲಭ್ಯವಾಗಿದೆ. ಇದನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಾನೆ. ಒಂದು ವೇಳೆ ಹೇಳಿದ್ರೆ ಪೈಲೆಟ್ ಟ್ರೈನಿಂಗ್‍ನಲ್ಲಿ ಫೇಲ್ ಮಾಡಿಸುತ್ತೀನಿ. ಹಾಗೇ ವಿದ್ಯಾರ್ಥಿ ವೇತನ ಸಿಗದಂತೆ ನೋಡಕೊಳ್ಳತ್ತೀನಿ ಎಂದು ಅಮರ್ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ.ಸದ್ಯ ಅಮರ್ ಜೀತ್ ಸಿಂಗ್ ಡಾಂಗೆ ವಿರುದ್ಧ ಕ್ಯಾಪ್ಟನ್ ಅಮಿತ್ ಸೊಬೆ ದೂರು ನೀಡಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೂ ದೂರು ಸಲ್ಲಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


