ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಅವರು ಕಪ್ಪು ಬಣ್ಣದ ಟಾಪ್ ಹಾಗೂ ಶಾರ್ಟ್ ಸ್ಕರ್ಟ್ ಧರಿಸಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಉಡುಪನ್ನು ಧರಿಸಿರುವ ರಾಧಿಕಾ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಫಿಟ್ನೆಸ್ ಬಗ್ಗೆ ಗಮನ ಹರಿಸುವ ರಾಧಿಕಾ ಇನ್ನೂ ತೆಳ್ಳಗೆ ಆಗಿದ್ದಾರೆ.15 ವರ್ಷಗಳ ಹಿಂದೆ ಇದ್ದಾಗ ಹೇಗಿದ್ದಿರೋ ಈಗಲೂ ಹಾಗೆಯೇ ಇದ್ದೀರಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಈ ಹಿಂದೆ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಯಾವಾಗಲೂ ಪಾಸಿಟೀವ್ ಆಗಿ ಇರುತ್ತೇನೆ. ನಾನು ಯಾವುದೇ ವಿಚಾರಕ್ಕೂ ಟೆನ್ಷನ್ ಮಾಡಿಕೊಳ್ಳುವುದಿಲ್ಲ. ಒತ್ತಡ ಅನ್ನೋದು ಎಲ್ಲರ ಜೀವನದಲ್ಲೂ ಇರುತ್ತದೆ. ಆದರೆ ನಾನು ಅದನ್ನು 5-10 ಮಿನಿಟ್ ತೆಗೆದುಕೊಳ್ಳುತ್ತೇನೆ. ನಂತರ ಅದನ್ನು ಮರೆತು ನನ್ನ ಕೆಲಸದ ಕಡೆ ಗಮನ ಕೊಡುತ್ತೇನೆ. ಯಾವಾಗಲೂ ಸಿನಿಮಾ, ಕುಟುಂಬ ಎಂದು ಬ್ಯುಸಿಯಾಗಿರುತ್ತೇನೆ. ಕುಟುಂಬದೊಂದಿಗೆ ಸಂತೋಷದಿಂದ ಇರುತ್ತೇನೆ ಎಂದು ತಮ್ಮ ಬ್ಯೂಟಿ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದರು.ಸದ್ಯಕ್ಕೆ ರಾಧಿಕಾ `ಭೈರಾದೇವಿ’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಮೂರು ಭಾಷೆಯಾಗಿರುವುದರಿಂದ ಸ್ವಲ್ಪ ತಡವಾಗುತ್ತಿದೆ. ಈ ತಿಂಗಳು ಸಂಪೂರ್ಣ ಶೂಟಿಂಗ್ ಮುಗಿಯುತ್ತದೆ ಎಂದು ಹೇಳಿದ್ದರು. ಜೊತೆಗೆ ರಾಜೇಂದ್ರ ಪೊನ್ನಪ್ಪ, ಹಾಗೂ ದಮಯಂತಿ ಸಿನಿಮಾದಲ್ಲಿಯೂ ಕೂಡ ಬ್ಯುಸಿಯಾಗಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


