ಬಾಗಲಕೋಟೆ: ರಸ್ತೆ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲು ಬಂದಿದ್ದ ಸ್ವಾಮೀಜಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲಾಡಳಿತ ಭವನದಲ್ಲಿ ನಡೆದಿದೆ.ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಇನಾಮ್ ಹಂಚಿನಾಳ ಗ್ರಾಮದ ಜ್ಞಾನಸಿದ್ಧಾಶ್ರಮದ 74 ವರ್ಷದ ಸೋಮಲಿಂಗೇಶ್ವರ ಶ್ರೀ ಮೃತಪಟ್ಟ ಸ್ವಾಮೀಜಿಯಾಗಿದ್ದಾರೆ. ಇವರು ತಮ್ಮ ಜ್ಞಾನಾಶ್ರಮಕ್ಕೆ ಹೋಗುವ ಕಚ್ಚಾ ರಸ್ತೆಯನ್ನು ದುರಸ್ತಿಗೊಳಿಸಿ, ಸರಿ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನ ಕೊಡಲು ಬಂದಿದ್ದರು. ಜಿಲ್ಲಾಡಳಿತ ಭವನದ ಚುನಾವಣಾ ಕೊಠಡಿಯ ಬಳಿ ತೆರಳುವಾಗ, ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದರು.ತಕ್ಷಣ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪ್ರಥಮ ಚಿಕಿತ್ಸೆ ನೀಡಲು ಮುಂದಾದ್ರು. ಆದ್ರೆ ಅಷ್ಟರಲ್ಲೇ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ. ಬಳಿಕ ಸ್ವಾಮೀಜಿ ಮೃತದೇಹವನ್ನ ಸರ್ಕಾರಿ ಶವಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


