ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನಿಸಿದರೆ ಬಿಜೆಪಿ ಸರ್ವನಾಶವಾಗುತ್ತದೆ ಅಂತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವೀರಪ್ಪ ಮೊಯ್ಲಿ ಶಾಪ ಹಾಕಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನಿಸಿದ್ರೆ ಬಿಜೆಪಿ ಸರ್ವನಾಶವಾಗುತ್ತದೆ. ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿದ್ರೆ ರಾಜ್ಯ ಹಾಗೂ ದೇಶದಲ್ಲೇ ಬಿಜೆಪಿ ಸರ್ವ ನಾಶವಾಗುತ್ತದೆ ಅಂತ ಹೇಳಿದ್ದಾರೆ.ಸಮ್ಮಿಶ್ರ ಸರ್ಕಾರ ಬೀಳಿಸುವ ಕೆಲಸಕ್ಕೆ ಬಿಜೆಪಿ ಕೈ ಹಾಕಲ್ಲ ಅನ್ನೋ ವಿಶ್ವಾಸವಿದೆ. ಯಾಕಂದ್ರೆ ಅಪರೇಷನ್ ಕಮಲ ಮಾಡಿ ಬಿಜೆಪಿ ಈಗಾಗಲೇ ವಿಫಲವಾಗಿದೆ. ಹಿಂದೆ ಅಪರೇಷನ್ ಕಮಲ ಮಾಡಿ ಬಿಜೆಪಿ ಪಕ್ಷ ಒಡೆದು ಹೋಯಿತು. ತದನಂತರ ಹೀನಾಯವಾಗಿ ಬಿಜೆಪಿಯವರು ಸೋತರು. ವಾಮಮಾರ್ಗದಿಂದ ಅಧಿಕಾರ ಹಿಡಿದ್ರೆ ಆ ವ್ಯಕ್ತಿ ಹಾಗೂ ಪಕ್ಷಕ್ಕೆ ನಷ್ಟವಾಗುತ್ತದೆ ಅಂದ್ರು.ಇದೇ ವೇಳೆ ಸತೀಶ್-ರಮೇಶ್ ಜಾರಕೊಹೊಳಿ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಒಬ್ಬ ವ್ಯಕ್ತಿಯಿಂದ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಸಾಧ್ಯವಿಲ್ಲ. ಸುಲಭವಾಗಿ 137 ವರ್ಷದ ಕಾಂಗ್ರೆಸ್ ಪಕ್ಷ ಒಡೆಯಲು ಆಗುವುದಿಲ್ಲ. 25 ಶಾಸಕರು ಬಿಜೆಪಿ ಪಕ್ಷ ಸೇರುವುದು ಅಂತ ಹೇಳಲಾಗುತ್ತಿರುವುದೆಲ್ಲ ಸುಳ್ಳು. ಜನರ ಬಳಿ ಹೋಗಿ ಅಧಿಕಾರ ಸಂಪಾದನೆ ಮಾಡಬೇಕು. ವಾಮಮಾರ್ಗದಿಂದ ಅಧಿಕಾರ ಹಿಡಿದ್ರೆ ಆಧಿಕಾರ ಶಾಶ್ವತ ಅಲ್ಲ ತಾತ್ಕಾಲಿಕ ಅಂತ ಅವರು ಹೇಳಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


