ದಾವಣಗೆರೆ: ಅಳಿಯನ ಕಿರುಕಳ ತಾಳಲಾರದೆ ಒಂದೇ ಕುಟುಂಬ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೂಲಂಬಿ ಗ್ರಾಮದಲ್ಲಿ ನಡೆದಿದೆ.ಯುವರಾಜ್ ನ ಮಾವ ಬಸವರಾಪ್ಪ (60), ಅತ್ತೆ ಸಾವಿತ್ರಮ್ಮ (50), ಪತ್ನಿ ಕವಿತಾ (32), ಮಕ್ಕಳಾದ ಗದಿಗೇಶ್ (4) ಹಾಗೂ ಹೇಮಂತ್ (7) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥರಾಗಿದ್ದ ಐವರನ್ನು ಸ್ಥಳೀಯರು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಎಂಟು ವರ್ಷದ ಹಿಂದೆ ಎರಡು ಕುಟುಂಬಸ್ಥರ ಒಪ್ಪಿಗೆಯಿಂದ ಕವಿತಾರನ್ನು ಮದುವೆ ಮಾಡಿ ಕಳುಹಿಸಿದ್ದರು. ಆದರೆ ಆರಂಭದಲ್ಲಿ ಚೆನ್ನಾಗಿದ್ದ ಯುವರಾಜ್ ಬಳಿಕ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದನು. ಅಲ್ಲದೇ ಹಣ ನೀಡುವಂತೆ ಅತ್ತೆ, ಮಾವ ಇಬ್ಬರಿಗೂ ಮಾನಸಿಕ ಕಿರುಕುಳ ನೀಡುತ್ತಿದ್ದನು.ಈ ಕುರಿತು ಊರಿನ ಗ್ರಾಮಸ್ಥರಿಗೆ ತಿಳಿಸಿ ರಾಜೀ ಪಂಚಾಯಿತಿ ನಡೆಸಿದರು ಆತ ತನ್ನ ವರ್ತನೆ ಬದಲಿಸಿರಲಿಲ್ಲ. ಮಗಳನ್ನ ಸರಿಯಾಗಿ ನೋಡಿಕೊಳ್ಳದ ಅಳಿಯ ರಾಜಿ ಪಂಚಾಯಿತಿಗೂ ಕ್ಯಾರೆ ಎನ್ನುತ್ತಿರಲ್ಲಿಲ್ಲ. ಇದ್ದರಿಂದ ಬೇಸತ್ತ ಕುಟುಂಬಸ್ಥರು ಇಬ್ಬರು ಬಾಲಕರಿಗೂ ವಿಷ ಕೂಡಿಸಿ ಬಳಿಕ ತಾವು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ತಕ್ಷಣ ಯುವರಾಜ್ ನಾಪತ್ತೆಯಾಗಿದ್ದು, ಈ ಘಟನೆ ಕುರಿತು ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಯುವರಾಜ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


