ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದವರು ಸಂಯುಕ್ತಾ ಹೆಗ್ಡೆ. ಆ ನಂತರ ಕಾಲೇಜು ಕುಮಾರ ಚಿತ್ರದಲ್ಲಿಯೂ ನಟಿಸಿದ್ದ ಸಂಯುಕ್ತಾ ಬಿಗ್‍ಬಾಸ್ ಶೋ ಸ್ಪರ್ಧಿಯಾದ ನಂತರದ ವಿದ್ಯಮಾನದ ಬಳಿಕ ದೂರ ಉಳಿದಿದ್ದರು. ಆ ನಂತರದಲ್ಲಿ ಅವರು ಕನ್ನಡದ ಯಾವ ಚಿತ್ರಗಳಲ್ಲಿಯೂ ನಟಿಸಿರಲಿಲ್ಲ. ಆದರೀಗ ಸಂಯುಕ್ತಾ ತಮಿಳು ಚಿತ್ರರಂಗದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ!ಬಹು ಹಿಂದಿನಿಂದಲೇ ಸಂಯುಕ್ತಾಗೆ ತಮಿಳು ಚಿತ್ರರಂಗದಿಂದ ಆಫರುಗಳು ಬರಲಾರಂಭಿಸಿದ್ದವಂತೆ. ಆದರೆ ಸಂಯುಕ್ತಾ ಅಳೆದೂ ತೂಗಿ ಇದೀಗ ಒಂದು ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ನಟ್ಟುದೇವ್ ಜೊತೆ ಸಂಯುಕ್ತಾ ಜೋಡಿಯಾಗಿ ನಟಿಸಲಿರೋ ಈ ಚಿತ್ರ ‘ಪಪ್ಪಿ’.ಒಂದು ಪ್ರೇಮ ಕಥನ, ಪ್ರಾಣಿ ಪ್ರೀತಿ ಹಾಗೂ ಡಾಗ್ ಬ್ರೀಡಿಂಗ್ ಸುತ್ತ ಹೆಣೆದಿರೋ ಮಾನವೀಯ ಅಂಶಗಳ ಥ್ರಿಲ್ಲಿಂಗ್ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಇವತ್ತಿನ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳೇ ಸವಕಲಾಗುತ್ತಿವೆ. ಈ ಜನರೇಷನ್ನಿನ ಕಣ್ಣಿನಲ್ಲಿ ಸಂಬಂಧಗಳು ಬೇರೆಯದ್ದೇ ಛಾಯೆಯಲ್ಲಿ ಕಾಣಿಸಲಾರಂಭಿಸಿವೆ. ಈ ಸೂಕ್ಷ್ಮ ಸಂಗತಿಯ ನೆಲೆಗಟ್ಟಿನಲ್ಲಿ ಈ ಚಿತ್ರದ ಕಥೆ ಹೆಣೆಯಲ್ಪಟ್ಟಿದೆಯಂತೆ.ಈ ಚಿತ್ರದ ಬಗ್ಗೆ ಸಂಯುಕ್ತಾ ಖುಷಿಯ ಮೂಡಿನಲ್ಲಿದ್ದಾರೆ. ತಮಿಳಿನಿಂದ ಸಾಲು ಸಾಲು ಅವಕಾಶಗಳು ಬರುತ್ತಿವೆ. ಆದರೆ ಈ ಚಿತ್ರದಲ್ಲಿ ಕಥೆ ಅದ್ಭುತವಾಗಿರೋ ಕಾರಣದಿಂದ ನಟಿಸಲು ಒಪ್ಪಿರೋದಾಗಿ ಹೇಳಿಕೊಂಡಿರುವ ಸಂಯುಕ್ತಾ ತಮಿಳಿನಲ್ಲಿ ನೆಲೆಗೊಳ್ಳುವ ಆಸೆ ಹೊಂದಿರುವಂತಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


