ರಾಯಚೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಮಗನ ರೂಪದಲ್ಲಿ ಪುನರ್ಜನ್ಮ ಪಡೆದಿದ್ದಾರೆ ಅಂತ ರಾಯಚೂರಿನ ದಂಪತಿಗಳು ಮಗುವಿಗೆ ಅಟಲ್ ಜೀ ಅಂತ ನಾಮಕರಣ ಮಾಡಿದ್ದಾರೆ.ಲಿಂಗಸುಗೂರಿನ ಸಜ್ಜಲ ಶ್ರೀ ಕಾಲೋನಿಯ ಪಾರ್ವತಿ ಶರಣ ಬಸವರಾಜ್ ದಂಪತಿ ತಮ್ಮ ಪುತ್ರನಿಗೆ ಅಟಲ್ ಜೀ ಅಂತ ಹೆಸರಿಟ್ಟಿದ್ದಾರೆ. ಅಟಲ್ ಬಿಹಾರಿ ವಾಜಪೇಯಿಯವರು ನಿಧನರಾಗಿ 13ನೇ ದಿನಕ್ಕೆ ಮಗು ಜನಿಸಿದ್ದರಿಂದ ವಾಜಪೇಯಿಯವರೇ ಪುನರ್ಜನ್ಮ ಪಡದಿದ್ದಾರೆ ಅಂತ ಭಾವಿಸಿದ್ದಾರೆ.ಕಾಶಿ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯ ಭಗವತ್ಪಾದರು ಮಗುವಿಗೆ ನಾಮಕರಣ ಮಾಡಿದ್ದಾರೆ. ಹಲವಾರು ಸ್ವಾಮೀಜಿಗಳ ಸಮ್ಮುಖದಲ್ಲಿ ನಾಮಕರಣ ಕಾರ್ಯ ನಡದಿದೆ. ಮತ್ಸದ್ದಿ, ಅಜಾತ ಶತ್ರುವಾಗಿದ್ದ ವಾಜಪೇಯಿ ಅವರ ಹಾಗೇ ತಮ್ಮ ಮಗು ಬೆಳೆಯಬೇಕು ಅನ್ನೋ ಆಶಯದಲ್ಲಿ ಅವರ ಹೆಸರಿಟ್ಟರುವುದಾಗಿ ಮಗುವಿನ ಪೋಷಕರು ಹೇಳಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


