ಬೆಂಗಳೂರು: ಇದೀಗ ರಾಧಿಕಾ ಪಂಡಿತ್ ಮೊದಲ ಬಸಿರಿನ ಸಂತಸದಲ್ಲಿದ್ದಾರೆ. ಸದ್ಯ ಈ ಅವಧಿಯ ಅವಶ್ಯಕ ಆರೈಕೆಯಲ್ಲಿ ತೊಡಗಿಸಿಕೊಂಡಿರೋ ರಾಧಿಕಾ ಮಗುವಿನ ಬಗ್ಗೆ ಕಾತರರಾಗಿದ್ದಾರೆ. ಈ ಹೊತ್ತಿನಲ್ಲಿಯೇ ಅವರ ಅಭಿಮಾನಿಗಳಿಗೊಂದು ಖುಷಿಯ ವಿಚಾರವನ್ನೂ ರವಾನಿಸಿದ್ದಾರೆ!ಇನ್ನೇನು ಡಿಸೆಂಬರ್ ಹೊತ್ತಿಗೆಲ್ಲ ಮಗು ರಾಧಿಕಾರ ಮಡಿಲು ತುಂಬಲಿದೆ. ಆದರೆ ಈಗಾಗಲೇ ರಾಧಿಕಾ ಹೊಸಾ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅವರು ಮೊದಲ ಸಲ ರಂಗಿತಂರಂಗ ಖ್ಯಾತಿಯ ನಿರೂಪ್ ಭಂಡಾರಿಗೆ ನಾಯಕಿಯಾಗಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ‘ಆದಿಲಕ್ಷ್ಮಿ ಪುರಾಣ’ ಎಂಬ ಶೀರ್ಷಿಕೆಯನ್ನು ಫೈನಲ್ ಮಾಡಲಾಗಿದೆ!ಇದೊಂದು ಅಪರೂಪದ ಪ್ರೇಮ ಕಥೆ ಹೊಂದಿದ ಚಿತ್ರವಂತೆ. ಇದರಲ್ಲಿ ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ಆದಿ ಮತ್ತು ಲಕ್ಷ್ಮಿಯರಾಗಿ ನಟಿಸಲಿರೋದಂತೂ ಪಕ್ಕಾ. ಅರೇ… ರಾಧಿಕಾ ಈಗ ಬಸುರಿ. ಡಿಸೆಂಬರಿನಲ್ಲಿ ಪಾಪು ಬರುತ್ತೆ. ಹಾಗಿರೋವಾಗ ಈ ಚಿತ್ರ ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವೇ.ಆದರೆ ಮಗು ಮಡಿಲು ಸೇರಿ ಒಂದಷ್ಟು ಕಾಲವಾದ ಮೇಲೆ ಈ ಚಿತ್ರದಲ್ಲಿ ರಾಧಿಕಾ ನಟಿಸಲಿದ್ದಾರೆ. ಈ ಚಿತ್ರದ ಮೂಲಕವೇ ಬಹು ಕಾಲದ ನಂತರ ಅವರು ನಟನೆಗೆ ಮರಳಲಿದ್ದಾರೆ. ಈ ಸುದ್ದಿ ನಿಜಕ್ಕೂ ರಾಧಿಕಾ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ!ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


