ರಾಮನಗರ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸಿ, ಮಾಂಗಲ್ಯ ಸರ ದೋಚಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ನಡೆದಿದೆ.ಕೋಡಂಬಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮ ಮಾಂಗಲ್ಯ ಸರ ಕಳೆದುಕೊಂಡವರು. ಭಾಗ್ಯಮ್ಮ ಅವರು ರಸ್ತೆ ಪಕ್ಕದಲ್ಲಿಯೇ ಹಸು ಮೇಯಿಸುತ್ತಿದ್ದರು. ಆಗ ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು, ವಿಳಾಸ ಕೇಳುವ ನೆಪದಲ್ಲಿ ಅವರನ್ನು ಮಾತನಾಡಿಸಿದ್ದಾರೆ.ಭಾಗ್ಯಮ್ಮ ಅವರ ಜೊತೆ ಮಾತನಾಡುತ್ತಲೇ ತಮ್ಮ ಸುತ್ತ-ಮುತ್ತ ಯಾರು ಇಲ್ಲವೆಂದು ಖಚಿತಪಡಿಸಿಕೊಂಡ ಕಳ್ಳರು, ಲಾಂಗ್ ತೆಗೆದು ಅವರ ಕುತ್ತಿಗೆ ಇಟ್ಟು, ಬೆದರಿಕೆ ಹಾಕಿದ್ದಾರೆ. ಮಾಂಗಲ್ಯ ಸರ ತಮ್ಮ ಕೈಗೆ ಸಿಗುತ್ತಿದ್ದಂತೆ ಪರಾರಿಯಾಗಿದ್ದಾರೆ. ಮಾಂಗಲ್ಯ ಸರ ಕಳೆದುಕೊಂಡ ಭಾಗ್ಯಮ್ಮ ಜಮೀನಿನಲ್ಲಿಲ್ಲೇ ಕುಳಿತು ಅಳುತ್ತಿದ್ದರಂತೆ. ಬಳಿಕ ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


