ಚಿಕ್ಕಮಗಳೂರು: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ತಲೆಯನ್ನು ಪೊಲೀಸ್ ಠಾಣೆಗೆ ತಂದಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.ಈ ಘಟನೆ ಅಜ್ಜಂಪುರ ಹೋಬಳಿಯ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ರೂಪ (30) ಕೊಲೆಯಾದ ಹೆಂಡತಿ. ಪತಿ ಸತೀಶ್ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನ ಕೊಲೆ ಮಾಡಿ ತಲೆಯನ್ನು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.ಸತೀಶ್ ಮತ್ತು ರೂಪ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ರೂಪ ಅದೇ ಗ್ರಾಮದಲ್ಲಿ ಸುನೀಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸತೀಶ್ ಅನುಮಾನ ಪಟ್ಟಿದ್ದನು. ಆದರೆ ಭಾನುವಾರ ಇಬ್ಬರು ಒಟ್ಟಿಗೆ ಇದ್ದರು ಎಂದು ಶಂಕಿಸಿ ಕೋಪಗೊಂಡು ಆಕ್ರೋಶದಿಂದ ಕತ್ತಿಯಿಂದ ಹೆಂಡತಿಯ ತಲೆ ಕತ್ತರಿಸಿದ್ದಾನೆ.ಈ ವೇಳೆ ಸುನೀಲ್ ತಪ್ಪಿಕೊಂಡಿದ್ದಾನೆ. ಬಳಿಕ ಸತೀಶ್ ತಲೆಯನ್ನು ಬ್ಯಾಗಿನಲ್ಲಿಟ್ಟುಕೊಂಡು ಸುಮಾರು 20 ಕಿ.ಮೀ. ವರೆಗೂ ಬಸ್ ಸಂಚಾರ ಮಾಡಿ ಶಿವನಿ ರೈಲ್ವೆ ಸ್ಟೇಷನ್‍ನಿಂದ ಅಜ್ಜಂಪುರ ಠಾಣೆಗೆ ಬಂದಿದ್ದು, ಕತ್ತಿ ಹಾಗೂ ತಲೆ ಎರಡನ್ನೂ ಪೊಲೀಸ್ ಠಾಣೆಗೆ ತಂದು  ಸತೀಶ್ ಸರೆಂಡರ್ ಆಗಿದ್ದಾನೆ.ಅಷ್ಟೇ ಅಲ್ಲದೇ ನನಗೆ ಯಾವ ಶಿಕ್ಷೆ ಕೊಡಬೇಕೋ ಕೊಡಿ, ಆದರೆ ಜೈಲಿನಿಂದ ಬಿಡುಗಡೆಯಾದ ನಂತರ ಆತನನ್ನು ಹುಡುಕಿ ಬಂದು ಕೊಲೆ ಮಾಡಿ ಮತ್ತೆ ಬರುತ್ತೇನೆ ಎಂದು ಹೇಳಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲ ಎಫ್‍ಐಆರ್ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


