ತುಮಕೂರು: ಬಟ್ಟೆ ತೊಳೆಯಲು ತಾಯಿಯೊಂದಿಗೆ ಕೆರೆಗೆ ಹೋಗಿದ್ದ ಬಾಲಕಿಯೊಬ್ಬಳು ಬೀದಿ ನಾಯಿಗಳ ದಾಳಿಗೆ ಬಲಿಯಾದ ಘಟನೆ ಕುಣಿಗಲ್ ತಾಲೂಕಿನ ಅರಸರ ಪಾಳ್ಯದಲ್ಲಿ ನಡೆದಿದೆ.ಅರಸರ ಪಾಳ್ಯ ಗ್ರಾಮದ ಗಂಗಾಧರಯ್ಯ ಎಂಬವರ ಪುತ್ರಿ ತೇಜಸ್ವಿನಿ (10) ಮೃತ ಬಾಲಕಿ. ತೇಜಸ್ವಿನಿ ಕುಣಿಗಲ್ ಸೇಂಡ್ ರಿಡಾ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಳು. ಭಾನುವಾರ ಶಾಲೆಗೆ ರಜೆ ಇದ್ದಿದ್ದರಿಂದ ತಾಯಿ ಗಂಗಮ್ಮ ಜೊತೆಗೆ ಬಟ್ಟೆ ತೊಳೆಯಲು ಹೋಗಿದ್ದಾಳೆ.ಕೆರೆಯ ದಂಡೆಯ ಮೇಲೆ ಬೆಳೆದಿದ್ದ ಅಣಬೆಯನ್ನು ಕೀಳುತ್ತಿದ್ದಾಗ, ಐದಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿವೆ. ಆದರೆ ಗಂಗಮ್ಮ ಅವರು ಮಗಳು ಹಿಂದೆ ಬರುತ್ತಿದ್ದಾಳೆ ಎಂದು ಮನೆಗೆ ಹೋಗಿದ್ದಾರೆ.ತಾವು ಮನೆಗೆ ಬಂದರೂ ಮಗಳು ಇನ್ನು ಬಾರದಿಂದ್ದಾಗ ಗಾಬರಿಗೊಂಡೆ ಗಂಗಮ್ಮ, ಪತಿಗೆ ಮಗಳನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ. ಕೆರೆಯ ಬಳಿ ಹೋಗಿ ನೋಡಿದಾಗ ತೇಜಸ್ವಿನಿ ರಕ್ತಸ್ರಾವದಿಂದ ಬಿದ್ದಿರುವುದು ಪತ್ತೆಯಾಗಿದೆ.ನಾಯಿಯ ದಾಳಿಯಿಂದಾಗಿ ರಕ್ತಸ್ರಾವಕ್ಕೆ ಒಳಗಾಗಿದ್ದ ತೇಜಸ್ವಿನಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


