ಹುಬ್ಬಳ್ಳಿ: ಮೂವರು ಹುಡುಗಿಯರು ಒಬ್ಬ ಬಾಯ್ ಫ್ರೆಂಡ್‍ಗೋಸ್ಕರ ನಡು ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ವಿಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.ಈ ಗಲಾಟೆ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ ಮುಂಭಾಗದಲ್ಲಿ ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿ ರಸ್ತೆಯ ಮೇಲೆ ಒಬ್ಬ ಹುಡುಗನನ್ನು ಮೂವರು ಹುಡುಗಿಯರು ಸುತ್ತುವರಿದಿದ್ದಾರೆ. ಇವ ನನ್ನ ಬಾಯ್ ಫ್ರೆಂಡ್, ಇವ ನನ್ನ ಬಾಯ್ ಫ್ರೆಂಡ್ ಅಂತ ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ವಿಡಿಯೋದಲ್ಲೇನಿದೆ?:
ವಿಡಿಯೋದಲ್ಲಿ ಒಬ್ಬ ಹುಡುಗ ಹುಡುಗಿಯನ್ನು ಕರೆದುಕೊಂಡು ಬರುತ್ತಿದ್ದನು. ಈ ವೇಳೆ ಹಿಂಬದಿಯಿಂದ ಇನ್ನೊಬ್ಬಳು ಬಂದು ಕಾಲಿನಿಂದ ಹುಡುಗಿಗೆ ಒದ್ದಿದ್ದಾಳೆ. ಇದರಿಂದ ಕೋಪಕೊಂಡ ಹುಡುಗಿ ಯುವತಿಯ ಜಡೆ ಹಿಂಡಿದುಕೊಂಡು ನಡುರಸ್ತೆಯಲ್ಲಿಯೇ ಪರಸ್ಪರ ಜಗಳವಾಡಿದ್ದಾರೆ. ಈ ವೇಳೆ ಮತ್ತೊಬ್ಬಳು ಬಂದು ಇಬ್ಬರ ಮೇಲೂ ತನ್ನ ಕಾಲಿನಿಂದ ಒದ್ದಿದ್ದಾಳೆ. ಮೂವರ ಜಗಳ ತಾರಕಕ್ಕೇರುತ್ತಿದ್ದಂತಯೇ ಅಲ್ಲಿದ್ದ ಹುಡುಗ ಗಲಾಟೆ ಬಿಡಿಸಲು ಪ್ರಯತ್ನ ಮಾಡಿದ್ದಾನೆ. ಆದರೆ ಏನು ಪ್ರಯೋಜನವಾಗಿಲ್ಲ. ನಂತರ ಸ್ಥಳದಲ್ಲಿದ್ದವರು ಬಂದು ಬಿಡಿಸಲು ಪ್ರಯತ್ನ ಮಾಡಿದ್ದಾರೆ.ಇವರು ಯಾರು? ಯಾಕೆ? ಹೊಡೆದಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಆದರೆ ಕಾರಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಮೂವರು ಹುಡುಗಿಯರು ಒಬ್ಬ ಹುಡಗನ ಸುತ್ತುವರಿದು ಹೊಡೆದಾಡುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


