ಬೆಂಗಳೂರು: ಇತ್ತೀಚೆಗೆ ಬೇರೆಯವರೊಬ್ಬರ ಜೊತೆ ಮದುವೆಯಾಗಿದ್ದ ಯುವತಿಯನ್ನು ಆಕೆಯ ಪ್ರಿಯಕರ ಮಾತನಾಡಿಸಲು ನಿರಾಕರಿಸಿದ್ದಕ್ಕೆ ಮನನೊಂದು ಚಲಿಸುತ್ತಿರುವ ಕಾರಿನಲ್ಲೇ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ನೆಲಮಂಗಲದ ಬಳಿ ನಡೆದಿದೆ.ಸುಮ (28) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಮೂಲತಃ ಬೆಂಗಳೂರಿನ ಸರಸ್ವತಿಪುರಂ ನಿವಾಸಿಯಾಗಿದ್ದು, ಇತ್ತೀಚೆಗೆ ಹರೀಶ್ ಎಂಬವರೊಂದಿಗೆ ವಿವಾಹವಾಗಿದ್ದರು. ಆದರೆ ಮದುವೆಗೂ ಮುನ್ನ ತುಮಕೂರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಮದುವೆಯ ನಂತರವೂ ಪತಿಯನ್ನು ತೊರೆದು ತನ್ನ ಪ್ರಿಯಕರನನ್ನು ಭೇಟಿಯಾಗಲು ತುಮಕೂರಿಗೆ ತೆರಳಿದ್ದಳು. ಈ ವೇಳೆ ಪ್ರಿಯಕರ ನೀನು ಈಗಾಗಲೇ ಮದುವೆಯಾಗಿದ್ದಿಯ, ಹರೀಶ್ ಜೊತೆ ಸುಖಾವಾಗಿರು ಎಂದು ಹೇಳಿ ಕಳುಹಿಸಿದ್ದಾನೆ.ಮಗಳು ತುಮಕೂರಿಗೆ ಹೋಗಿರುವ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೋಷಕರು, ಸುಮಾಳನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಪ್ರಿಯಕರ ತನ್ನ ಹತ್ತಿರ ಮಾತನಾಡದೇ ಇದ್ದಿದ್ದಕ್ಕೆ ಚಲಿಸುತ್ತಿರುವ ಕಾರಿನಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಘಟನೆ ಸಂಬಂಧ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


