ಉಡುಪಿ: ಭಾರತ್ ಬಂದ್ ಗೆ ಕಾಂಗ್ರೆಸ್ ಕರೆ ಕೊಟ್ಟಿದೆ. ಅಚ್ಚೇ ದಿನ್ ಬರುತ್ತೆ ಅಂತ ಮೋದಿಯ ಮಾತಿಗೆ ಕಾದರೆ ದೇಶ ಬರ್ಬಾದ್ ಆಗುತ್ತದೆ ಅಂತ ಉಡುಪಿ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ವ್ಯಂಗ್ಯವಾಡಿದರು.ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಬೆಲೆ ಏರಿಕೆ ಆಗೋದು ಸಾಮಾನ್ಯ. ಆದರೆ ಕೇಂದ್ರ ಬಿಜೆಪಿ ಸರ್ಕಾರದ್ದು ಯಾಕೋ ವಿಪರೀತವಾಯಿತು. ಇದನ್ನು ಎಲ್ಲರೂ ಒಕ್ಕೂರಲಿನಿಂದ ಖಂಡಿಸಬೇಕು ಅಂತ ಬಂದ್ ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಪರವಾಗಿ ಕರೆ ನೀಡಿದರು. ಸೋಮವಾರ ಭಾರತ್ ಬಂದ್ ಹಿನ್ನೆಲೆಯಲ್ಲಿ ನಾವು ಬಿಜೆಪಿಯವರಂತೆ ಬೆಂಕಿ ಹಾಕಿ ಪ್ರತಿಭಟನೆ ಮಾಡೋದಿಲ್ಲ. ಅಂಗಡಿಗಳ ಶಟರ್ ಎಳೆದು ಸಮಸ್ಯೆ ಕೊಡುವುದಿಲ್ಲ. ಜನತೆಯ ಮೇಲೆ ಯಾವುದೇ ಒತ್ತಡ ಹಾಕುವುದಿಲ್ಲ ಅಂತ ಹೇಳಿದರು. ಕಾಂಗ್ರೆಸ್ ಕರೆ ನೀಡಿದ ಭಾರತ್ ಬಂದ್ ಗೆ ಜಿಲ್ಲೆಯ ಮಟ್ಟಿಗೆ ಭಾರೀ ಬೆಂಬಲ ಸಿಕ್ಕಿದೆ ಎಂದರು. ಇದನ್ನು ಓದಿ: ಕರ್ನಾಟಕದಲ್ಲಿ ಬಹುತೇಕ ಬಂದ್ ಖಚಿತ – ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಾರಿಗೆ ಸ್ತಬ್ಧಪೆಟ್ರೋಲ್, ಡೀಸೆಲ್ ಗ್ಯಾಸ್ ಜನರ ಕಿಸೆ ಸುಡುತ್ತಿದೆ. ಮೋದಿಯ ಅಚ್ಚೇ ದಿನ್ ಗೆ ಕಾದರೆ ದೇಶ ಬರ್ಬಾದ್ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಡುಪಿಯ ಎಲ್ಲಾ ಸಂಸ್ಥೆಗಳು ಕೈಜೋಡಿಸಿದೆ. ಬಂದ್ ಗೆ ಖಾಸಗಿ ಬಸ್ ಮಾಲೀಕರು ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ ಎಂದರು.ಟ್ಯಾಕ್ಸಿ, ಆಟೋ ಚಾಲಕ ಮಾಲೀಕರಿಂದಲೂ ಬೆಂಬಲ ಬಂದಿದೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ಜಿಲ್ಲಾಡಳಿತಕ್ಕೆ ಕಾಂಗ್ರೆಸ್ ಮನವಿ ಮಾಡಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


