ಬೆಂಗಳೂರು: ಬಿಜೆಪಿಯಿಂದ ನಮ್ಮ ಸರ್ಕಾರ ಕೆಡವಲು ಬಿಜೆಪಿ ಯತ್ನ ಎಂಬ ಕಾಂಗ್ರೆಸ್ ಆರೋಪ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸರ್ಕಾರ ಬೀಳಿಸೋ ಯತ್ನ ಮಾಡಿಲ್ಲ. ಕಾಂಗ್ರೆಸ್ ನವರಿಗೆ ಆತಂಕ ಯಾಕಿದೆಯೋ ಭಗವಂತನಿಗೆ ಗೊತ್ತು. ಬೇರೆ ಬೇರೆಯವರು ಪಕ್ಷಕ್ಕೆ ಸೇರಲು ಸಜ್ಜಾಗ್ತಿದ್ದಾರೆ ಅಂದ್ರು.ನಾನು ದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿಣಿಗೆ ಹೋಗೋದಿಲ್ಲ. ಲೋಕಸಭಾ ಚುನಾವಣೆಗೆ ಸಜ್ಜಾಗ್ತಿದ್ದೀವಿ, ಪ್ರವಾಸ ಶುರು ಮಾಡಬೇಕು. ಕಳೆದ ಬಾರಿ ಎಲ್ಲೆಲ್ಲಿ ವೀಕ್ ಇದ್ದ ಕಡೆ ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕೋದಕ್ಕೆ ಪ್ಲಾನ್ ಮಾಡ್ತಿದ್ದೀವಿ ಅಂತ ಅವರು ಹೇಳಿದ್ರು.ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಪ್ರಧಾನ ಮಂತ್ರಿಗಳ ಭೇಟಿ ಮಾಡಲಿದ್ದು, ಈ ವೇಳೆ ಸಂಸದರು, ಸಚಿವರು, ವಿರೋಧ ಪಕ್ಷದ ನಾಯಕರು ಕೂಡ ಸಾಥ್ ನೀಡಲಿದ್ದಾರೆ. ಸೋಮವಾರ ಬೆಳಗ್ಗೆ 11.15 ಕ್ಕೆ ಪ್ರಧಾನ ಮಂತ್ರಿಗಳ ಭೇಟಿ ನಿಗಧಿಯಾಗಿದೆ. ಅತಿವೃಷ್ಟಿ ಸಂಬಂಧ ಪರಿಹಾರ ಕೋರಿ ನಿಯೋಗ ಮನವಿ ಸಲ್ಲಿಸಲಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


