ಬೆಂಗಳೂರು: ಫಸ್ಟ್ ರ‍್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಸಿನಿಮಾಗಳ ಮೂಲಕ ಕಮಾಲ್ ಮಾಡಿದ ಗುರುನಂದನ್ ಈಗ ಮಿಸ್ಸಿಂಗ್ ಬಾಯ್ ಅವತಾರದಲ್ಲಿ ಬರುತ್ತಿದ್ದಾರೆ. ‘ಫೇರ್ ಅಂಡ್ ಲವ್ಲಿ’ ಸಿನಿಮಾದ ಸಾರಥಿ ರಘುರಾಮ್ ನೈಜ ಕಥೆಗೆ ಸಿನಿಮಾ ಟಚ್ ಕೊಟ್ಟು ಮಿಸ್ಸಿಂಗ್ ಬಾಯ್ ಕಥೆ ರೆಡಿ ಮಾಡಿದ್ದಾರೆ. ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡು ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ.1990 ರಲ್ಲಿ 5 ವರ್ಷದ ಹುಡುಗ ತಂದೆ, ತಾಯಿ ಇಂದ ತಪ್ಪಿ ಹೋಗುತ್ತಾನೆ. ಈ ಹುಡುಗ ತನ್ನ ಕುಟುಂಬವನ್ನು ಹುಡುಕೋದು ಸಿನಿಮಾದ ಒನ್‍ಲೈನ್ ಸ್ಟೋರಿ. 5 ವರ್ಷದ ಹುಡುಗ ಮಿಸ್ ಆಗೋಕ್ಕೆ ಕಾರಣ ಏನು..? ಮತ್ತೆ ತಾಯಿಯನ್ನ ಹುಡುಕೊದು ಹೇಗೆ..? ಮಿಸ್ಸಿಂಗ್ ಬಾಯ್‍ಗೆ ತನ್ನ ಫ್ಯಾಮಿಲಿ ಸಿಗುತ್ತಾ ಅನ್ನೋ ಹತ್ತು ಹಲವು ಪ್ರಶ್ನೆಗಳನ್ನ ಹುಟ್ಟುಹಾಕುತ್ತೆ ರಿವಿಲ್ ಆಗಿರೋ ಟೀಸರ್.ಗುರುನಂದನ್ ಜೊತೆ ಸುಮಿತ್ರ, ರಂಗಾಯಣ ರಘು, ಕಿರಣ್, ರವಿಶಂಕರ್ ಗೌಡ, ಆರ್ ಜೆ ಪ್ರದೀಪ ಸೇರಿದಂತೆ ಹಲವು ಕಲಾವಿದ್ರು ಮಿಸ್ಸಿಂಗ್ ಬಾಯ್‍ಗೆ ಸಾಥ್ ಕೊಟ್ಟಿದ್ದಾರೆ. ಸದ್ಯ ರಿವಿಲ್ ಆಗಿರೋ ಟೀಸರ್ ಯುಟ್ಯೂಬ್‍ನಲ್ಲಿ ಒಳ್ಳೆ ಸೌಂಡ್ ಮಾಡುತ್ತಿದ್ದು ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆಗಳನ್ನ ಹೆಚ್ಚಿಸಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


