ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಪುಟ್ಟಗೌರಿ ಮದುವೆ’ ಶೂಟಿಂಗ್ ಸೆಟ್‍ನಲ್ಲಿ ನಟ ರಕ್ಷಿತ್ (ಮಹೇಶ) ಕೂದಲೆಳೆಯ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಇತ್ತೀಚೆಗೆ ಫೈಟ್ ಸೀನೊಂದು ಚಿತ್ರೀಕರಿಸಲಾಗಿತ್ತು. ಈ ದೃಶ್ಯದಲ್ಲಿ ಮಹೇಶ ಹಾಗೂ ಹಿಮಾ ಜೀಪ್‍ನಲ್ಲಿ ಹೋಗುವಾಗ ರೌಡಿಗಳು ಅವರ ಮೇಲೆ ದಾಳಿ ನಡೆಸಲು ಮುಂದಾಗುತ್ತಾರೆ.ಈ ವೇಳೆ ರೌಡಿಗಳು ಟ್ಯೂಬ್‍ಲೈಟ್‍ನಿಂದ ಮಹೇಶನ ಮೇಲೆ ಹಲ್ಲೆ ಮಾಡವ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು. ರೌಡಿಗಳು ಟ್ಯೂಬ್‍ಲೈಟ್‍ನಿಂದ ಮಹೇಶನಿಗೆ ಹೊಡೆಯುವಾಗ ಅದರ ಪೀಸ್‍ಗಳು ಕಣ್ಣಿಗೆ ಚುಚ್ಚಬೇಕಿತ್ತು. ಅಷ್ಟರಲ್ಲಿ ಮಹೇಶ ಈ ಅವಘಡದಿಂದ ಪಾರಾಗಿದ್ದಾರೆ.ಸದ್ಯ ಮಹೇಶ ಅಲಿಯಾಸ್ ರಕ್ಷಿತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಅವರ ಆರೋಗ್ಯ ಕೂಡ ಚೆನ್ನಾಗಿದೆ ಎಂದು ಪುಟ್ಟಗೌರಿ ಧಾರವಾಹಿ ತಂಡ ತಿಳಿಸಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


