ಚಿಕ್ಕಬಳ್ಳಾಪುರ: ಆಟೋಗೆ ಆಡ್ಡ ಬಂದ ನಾಯಿಯ ಪ್ರಾಣ ಉಳಿಸಲು ಹೋಗಿ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಮಾದನಾಯಕನಹಳ್ಳಿ ಬಳಿ ನಡೆದಿದೆ.ಮಂಡಿಕಲ್ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಚಂದು(10) ಮೃತ ವಿದ್ಯಾರ್ಥಿ. ಚಂದು ಇಂದು ಆಟೋದಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಧಿಡೀರ್ ಅಂತ ಮಾದನಾಯಕನಹಳ್ಳಿ ಬಳಿ ನಾಯಿಯೊಂದು ಅಡ್ಡಬಂದಿದೆ. ಈ ವೇಳೆ ನಾಯಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋದ ಆಟೋ ಚಾಲಕ ಸಡನ್ ಆಗಿ ಸೈಡಿಗೆ ಆಟೋವನ್ನು ಚಲಾಯಿಸಿದ್ದಾನೆ.ಈ ವೇಳೆ ಆಟೋ ಪಲ್ಟಿಯಾಗಿದೆ. ಇದರಿಂದ ಆಟೋದಲ್ಲಿದ್ದ ಚಂದು ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


