ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ಸೈಕೋ ಪ್ರತ್ಯಕ್ಷವಾಗಿದ್ದು, ನಡುರಸ್ತೆಯಲ್ಲಿ ಬೆತ್ತಲೆ ನಿಂತು ಅಸಭ್ಯ ವರ್ತನೆ ತೋರಿದ ಕಾಮುಕನನ್ನು ಆರ್.ಟಿ ನಗರ ಪೊಲೀಸರು ಬಂಧಿಸಿದ್ದಾರೆ.ಮಹಮ್ಮದ್ ಸಿದ್ದಿಕ್ ನಡುರಸ್ತೆಯಲ್ಲಿ ಬೆತ್ತಲೆ ನಿಂತ ಕಾಮುಕ. ಸಂಜೆ ವೇಳೆಯಲ್ಲಿ ಮಹಮ್ಮದ್ ಸಿದ್ದಿಕ್ ಪ್ರತ್ಯಕ್ಷವಾಗುತ್ತಿದ್ದು, ಈತನ ಕಾಟಕ್ಕೆ ಸಿಲಿಕಾನ್ ಸಿಟಿ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ಸೈಕೋ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸಿದ್ದಿಕ್ ಆಯುರ್ವೇದ ಡಾಕ್ಟರ್ ಎಂದು ಆರ್.ಟಿ ನಗರದಲ್ಲಿರುವ ಮನೆಗೆ ಬರುತ್ತಿದ್ದನು. ಈ ವೇಳೆ ಸಾರ್ವಜನಿಕರು ಆತನನ್ನು ರೇಡ್ ಹ್ಯಾಂಡಾಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಹೊಯ್ಸಳ ಪೊಲೀಸರಿಗೆ ಕಾಮುಕನನ್ನು ಒಪ್ಪಿಸಿದ್ದಾರೆ.ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಆರ್.ಟಿ ನಗರದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ಬಗ್ಗೆ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


